ನೀವು ಸ್ಪಾ ಗೆ ಹೋಗತ್ತೀರಾ? ಹೋಗುವ ಮುನ್ನ ಇವುಗಳ ಬಗ್ಗೆ ಇರಬೇಕು ಎಚ್ಚರ…!!
ಹುಬ್ಬಳ್ಳಿ: ಹು-ಧಾ ಅವಳಿನಗರ ಬೆಳೆದಂತೆ ಅನೇಕ ವಾಣಿಜ್ಯ ಚಟುವಟಿಕೆಗಳು ಗದಗೆದರಿವೆ. ಜನರು ಸಮಯದ ಹಿಂದೆ ಬಿದ್ದು ಕೆಲಸದ ಒತ್ತಡಕ್ಕೆ ಸಿಲುಕಿ, ಬ್ಯುಜಿ ಲೈಫ್ ಲೀಡ್ ಮಾಡತ್ತಿದ್ದಾರೆ. ಈ ಮಧ್ಯೆ ಸಮಯ ಸಿಕ್ಕಾಗ ಸ್ವಲ್ಪ ನಿರಾಳತೆ ಬಯಸುವವರು ದೂರದ ಪ್ರವಾಸ, ಇಲ್ಲವೇ ಪಿಕ್’ನಿಕ್ ಮಾಡತ್ತಾರೆ. ಮತ್ತೆ ಕೆಲವರು “ಸ್ಪಾ” ಗಳ ಮೊರೆ ಹೋಗತ್ತಾರೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಏರಿಯಾಗಳಲ್ಲಿ ಸ್ಪಾ (ಬಾಡಿ ಮಸಾಜ್) ಅಂಗಡಿಗಳು ತೆರೆದು ಸೇವೆ ನೀಡಲು ಮುಂದಾಗುತ್ತಿವೆ. ಇದು ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಜನಸಾಮಾನ್ಯರಿಗೂ ಗೊತ್ತಿರುವ ವಿಚಾರ, ಆದರೆ ನಾವು ಇದೀಗ ನಿಮಗೆ ಹೇಳಲು ಹೊರಟಿರುವ ವಿಚಾರ ಏನೆಂದರೆ ಸ್ಪಾ ದಿಂದ ಆಗುವ ಅಡ್ಡ ಪರಿಣಾಮಗಳು ಏನೇನೂ ಅಂತಾ.
ಕೆಲವು ಸ್ಪಾಗಳು ಸರ್ಕಾರದ ಪರವಾನಗಿ ಪಡೆದು, ನಿಯಮದ ಅಡಿಯಲ್ಲಿ ಸೇವೆ ನೀಡುತ್ತಿದ್ದರೇ, ಮತ್ತೆ ಕೆಲವು ತಾವು ಮಾಡಿದ್ದೆ ಸರಿ ಎಂಬಂತೆ ಅಧಿಕಾರಿಗಳ ಕಣ್ಣಿಗೆ ಮಣ್ಣು ಎರಗಿ ಮನಬಂದಂತೆ ಸ್ಪಾ ತೆರೆದು ಜನರಿಗೆ ಸ್ಪಾ ಹೆಸರಿನಲ್ಲಿ ರೋಗ ಹಚ್ಚಿಸುವ ಕೆಲಸ ಮಾಡುತ್ತಿದ್ದಾರೆ.
ಸ್ಪಾ ಅಂದರೆ ಅಲ್ಲಿ ತಜ್ಞ ಥೆರಪಿಸ್ಟ್’ಗಳು ಮಸಾಜ್ ಮಾಡಿ ದೇಹದ ನೋವು ಮಂಗ ಮಾಯ ಮಾಡುತ್ತಾರೆಂಬ ಭಾವನೆ ಇರುತ್ತದೆ. ಅದಾಗ್ಯೂ ಒತ್ತಡದ ಜೀವನದಲ್ಲಿ ಸ್ವಲ್ಪ ರಿಲ್ಯಾಕ್ಸ್ ಪಡೆದಿರುವ ತೃಪ್ತಿ ಜನರಾಗಿರುತ್ತದೆ.
ಆದರೆ ಇದೀಗ ಸ್ಪಾ ಹೆಸರಿನಲ್ಲಿ ಕೆಲವು ದುಷ್ಟರು ಮಾಂಸ ದಂಧೆಗೆ ಇಳಿದಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಇದು ಸಾಮಾನ್ಯರ ಜನರ ಮಾಯಲ್ಲಿ ಹರಿಹಾಡುತ್ತಿದೆ.
ಇನ್ನೂ ಒಬ್ಬ ಗ್ರಾಹಕ ಸ್ಪಾ ಸೆಂಟರ್’ಗೆ ಹೋದರೇ ಕನಿಷ್ಠ 1500 ರೂ ದಿಂದ 2000 ಕೊಟ್ಟು ಮಸಾಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಮಸಾಜ್ ಎಷ್ಟರಮಟ್ಟಿಗೆ ಆರೋಗ್ಯಕರ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಸ್ಪಾದಲ್ಲಿ ಕ್ಲಿನ್ ಮೆಂಟೆನೆನ್ಸ್ ಇರುತ್ತಾ? ಒಂದೇ ಥೆರಪಿಸ್ಟ್ ಎಷ್ಟು ಜನರಿಗೆ ಮಸಾಜ್ ಮಾಡ್ತಾರೇ? ಮಸಾಜ್ ಮಾಡುವ ಥೆರಪಿಸ್ಟ್ ಆರೋಗ್ಯವಂತಳಾ? ಎಂಬ ಪ್ರಶ್ನೆಗಳು ಸರ್ವೇಸಾಮಾನ್ಯವಾಗಿ ಪ್ರಜ್ಞಾವಂತರಿಗೆ ಕಾಡುತ್ತಿದೆ.
ಪ್ರತಿಯೊಂದು ಸ್ಪಾದಲ್ಲಿ ಸಹ ಕ್ಲಿನ್ ಮೆಂಟೆನೆನ್ಸ್ ಕಡಿಮೆ ಎಂಬುದು ಗ್ರಾಹಕರ ಆರೋಪವಾಗಿದೆ. ಬರುವ ಗ್ರಾಹಕರಿಗೇ ಯಾರಿಗಾದರೂ ಚರ್ಮ ರೋಗ ಇದ್ರೇ ಹೇಗೆ? ಆತನಿಗೆ ಥೆರಪಿಸ್ಟ್ ಸೇವೆ ನೀಡಿ, ಅದೇ ಕೈಯಿಂದ ಮತ್ತೊಬ್ಬ ಗ್ರಾಹಕನಿಗೆ ಸೇವೆ ಕೊಟ್ಟರೆ ಹೇಗೆ? ಆರೋಗ್ಯ ಹಿತದೃಷ್ಟಿಯಿಂದ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅವಳಿನಗರದಲ್ಲಿ ನಾಯಿ ಕೊಡೆ ಹಾಗೇ ಹುಟ್ಟಿರುವ ಸ್ಪಾಗಳ ಮೇಲೆ ಪಾಲಿಕೆ ಆರೋಗ್ಯ ಅಧಿಕಾರಿಗಳು ತಮ್ಮ ತಂಡದ ಸಮೇತ ಭೇಟಿ ನೀಡಿ ಸ್ಪಾಗಳ ಪರಿಶೀಲನೆ ನಡೆಸಿ, ಅಲ್ಲಿರುವ ಥೆರಪಿಸ್ಟ್’ಗಳ ಆರೋಗ್ಯ ತಪಾಸಣೆ ಮಾಡುವುದು ಸೂಕ್ತವಾಗಿದೆ. ಇಲ್ಲವಾದರೆ ಅಲ್ಲಿ ಹೋಗುವ ಗ್ರಾಹಕರಿಗೆ ರೋಗ ಹಾಗೂ ಇತರ ಕಾಯಿಲೆಗಳು ಬರುವು ಸಾಧ್ಯತೆ ಹೆಚ್ಚು ಎಂದು ತಜ್ಞ ವೈದ್ಯರ ಅಭಿಪ್ರಾಯ ಆಗಿದೆ.