ಪ್ರೆಸ್ ಕ್ಲಬ್ ಗೆ ಮಳ್ಳನಂತೇ ಬಂದು ಹೆಲ್ಮೆಟ್ ಕದ್ದ ಕಳ್ಳ: CCTV ಯಲ್ಲಿ ಕಳ್ಳರ ಕೈಚಳಕ ಸೆರೆ…
ಹುಬ್ಬಳ್ಳಿ: ಪೋಲಿಸ್ ಇಲಾಖೆ ವಾಹನ ಸವಾರರ ರಕ್ಷಣೆಯ ಹಿತದೃಷ್ಟಿಯಿಂದ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದೆ. ಅದರಂತೆ ಬೈಕ್ ಸವಾರರು ಸಹ ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಲ್ಮೆಟ್ ಖರೀದಿ ಮಾಡಿರುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿ ಇದೀಗ ಹೆಲ್ಮೆಟ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದು ವಾಹನ ಸವಾರರಿಗೆ ತಲೆನೋವಾಗಿದೆ.
ಹೌದು, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ವರದಿಗಾರರು ತಮ್ಮ ಬೈಕ್ ಪಾರ್ಕ್ ಮಾಡಿ, ಹೆಲ್ಮೆಟ್ ಸಹ ಬೈಕ್ ಮೇಲೆ ಇಟ್ಟಿರುವುದನ್ನ ಗಮನಿಸಿದ ಕಳ್ಳನೊಬ್ಬ ಮಳ್ಳನಂತೇ ಬಂದು ಹೆಲ್ಮೆಟ್ ಕದ್ದು ಪರಾರಿಯಾಗಿದ್ದಾನೆ. ಈ ದೃಶ್ಯಗಳು ಅಲ್ಲಿಯೇ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನೂ ಅದೆಷ್ಟೋ ಬಾರಿ ಪ್ರೇಸ್ ಕ್ಲಬ್’ನಲ್ಲಿ ಹೆಲ್ಮೆಟ್ ಕಳ್ಳತನವಾಗಿರುವ ಘಟನೆಗಳು ನಡೆದಿವೆ. ಇದೀಗ ಚಾಲಕಿ ಕಳ್ಳ ಹೆಲ್ಮೆಟ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಹುಬ್ಬಳ್ಳಿ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೋಲಿಸರು ಹೆಲ್ಮೆಟ್ ಟಾರ್ಗೆಟ್ ಮಾಡುತ್ತಿರುವ ಕಳ್ಳರನ್ನು ಪತ್ತೆ ಹಚ್ಚಿ ಈ ಸಮಸ್ಯೆಗೆ ಪುಲ್ ಸ್ಟಾಪ್ ಇಡಬೇಕಿದೆ.