ಹುಬ್ಬಳ್ಳಿ: ಜನರ ರಕ್ಷಣೆ ಮಾಡಬೇಕಾದ ಪೋಲಿಸರು ಗ್ರಾಮೀಣ ಭಾಗದಲ್ಲಿ ಓಸಿ ಹೆಸರಿನಲ್ಲಿ ಯಾವುದೇ ಕೇಸ್ ದಾಖಲಿಸಿದೇ ಹಣ ಪೀಕಿರುವ ಗಂಭೀರ ಆರೋಪ ಇದೀಗ ಫಿಶ್ ಮಾರುಕಟ್ಟೆ ಸುತ್ತಮುತ್ತ ಮೀನಿನ ವಾಸನೆಯಂತೆ ಹರಡುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ವಿಜಯಪುರ ರಸ್ತೆಯ ಪಕ್ಕದ ಊರಲ್ಲಿ ಓಸಿ ಬರೆಯುವ ಕಿಂಗ್ ಪಿನ್’ಗಳು ಊರಲ್ಲಿ ಮಟ್ಕಾ ಬರೆದುಕೊಂಡು ಅದನ್ನು What’s app ಮೂಲಕ ಸಿಟಿಯಲ್ಲಿನ ತನ್ನ ಮೇಲಿನ ಕಿಂಗ್ ಪಿನ್’ಗೆ ಕಳಿಸಿದ್ದಾನೆ. ಅದನ್ನೇ ಬಂಡವಾಳ ಮಾಡಿಕೊಂಡ ರಕ್ಷಕರು ಮೇನ್ ಕಿಂಗ್ ಪಿನ್ ಮೂಲಕ ಮಾಹಿತಿ ಪಡೆದು ವಿಚಾರಣೆಯ ಹೆಸರಿನಲ್ಲಿ ಯಾವುದೇ ಕೇಸ್ ದಾಖಲಿಸಿಕೊಳ್ಳದೇ, ಒಬ್ಬರಿಂದ 30k ಮತ್ತೊಬ್ಬರಿಂದ 20k ಪಿಕಿ “ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೇ ಯಾರಿಗೂ ಗೊತ್ತು ಆಗುವುದಿಲ್ಲ” ಎಂಬಂತೆ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆಂಬ ಸದ್ದು ಇದೀಗ ಗಂಗಾಧರ ನಗರದವರೆಗೆ ಹರಡಿದೆ.
ಆದರೆ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ಇದ್ದಂತೆ ಕಾಣುತ್ತಿಲ್ಲ. ಸದ್ಯ ಇಲಾಖೆಗೆ ಕಪ್ಪುಚುಕ್ಕೆ ತರುವ ಕೆಲಸವಂತು ನಡೆದಿದ್ದು, ಈ ಬಗ್ಗೆ ಮೇಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳತ್ತಾರೆ ಕಾದುನೋಡೋಣ.