ಗುಡೇನಕಟ್ಟಿಯ 4.90 ಲಕ್ಷದ ಬ್ರಿಡ್ಜ್ ದ್ವಂಸ ! ಅಧಿಕಾರಿಗಳು ಸುಳ್ಳು ಹೇಳಿದ್ರಾ ? ಏನಿದು ಗಿಮಿಕ್ …
ಕುಂದಗೋಳ : ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಮಂಜೂರಾಗುವ ಕಾಮಗಾರಿಗಳು ಸರಿಯಾಗಿ ನಡೆಯದೇ ಗುತ್ತಿಗೆದಾರನ ಕೈ ಚೀಲ ತುಂಬಿಸಲು, ಅಧಿಕಾರಿಗಳ ಜೇಬು ತುಂಬಿಸಲು ಮಾತ್ರ, ಊರ ಅಭಿವೃದ್ಧಿಗಾಗಿ ಅಲ್ಲಾ ಎಂದು ಜನ ಮಾತನಾಡುತ್ತಿದ್ದಾರೆ.
ಈ ರೀತಿ ಮಾತನಾಡಲು ಒಂದು ಕಾರಣ ಇದೇ, ಅದು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಅಲ್ಲಾಪೂರ ಮಾರ್ಗದ ಹಳ್ಳಕ್ಕೆ ಈ ಹಿಂದೆ ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗ ಹಾಗೂ ಗ್ರಾಮ ಪಂಚಾಯಿತಿ ಗುಡೇನಕಟ್ಟಿ ನರೇಗಾ ಕಾಮಗಾರಿ 4.90 ಲಕ್ಷ ಸೇರಿ 9.80 ಲಕ್ಷದಲ್ಲಿ ಬ್ರಿಡ್ಜ್ ಕಾಮಗಾರಿ ನಡೆದು 4.90 ಲಕ್ಷ ಹಣ ಸಹ ಮಂಜೂರಾಗಿ ಕಾಮಗಾರಿ ನಡೆದಿತ್ತು.
ಈ ಕಾಮಗಾರಿ ಕಳಪೆ ಕಂಡು ಜನ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾತ್ರೋರಾತ್ರಿ ಬ್ರೀಡ್ಜ್ ನೆಲಸಮವಾಗಿತ್ತು, ಈ ಬಗ್ಗೆ ಪಂಚಾಯತ್ ರಾಜ್ ಮುಖ್ಯ ಇಂಜಿನಿಯರ್ ಎ.ಐ.ನಾಯ್ಕರ್ ಯಾರೋ ದುಷ್ಕರ್ಮಿಗಳು ಬ್ರೀಡ್ಜ್ ಕೆಡವಿದ್ದಾರೆ ಎಂದು ಮೌಖಿಕ ಹೇಳಿಕೆ ನೀಡಿ ನುಣುಚಿಕೊಂಡಿದ್ದರು.
ಈ ಬಗ್ಗೆ ಪುನಃ ಯಾವುದೇ ತನಿಖೆಯನ್ನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿಕೆ ಮೇಡಂ ನಡೆಸದೆ ಕೈ ಬಿಟ್ಟು ಕಾರಣ ಸರ್ಕಾರಿ ಕಾಮಗಾರಿಯೊಂದು ಅದರಲ್ಲೂ ಬರೋಬ್ಬರಿ 4.90 ಲಕ್ಷ ನೀರಲ್ಲಿ ಹೋಮವಾಯಿತು. ಸಾರ್ವಜನಿಕ ತೆರಿಗೆ ಹಣ ಈ ರೀತಿ ಆದರೆ ಯಾರು ಹೊಣೆ?
ಇದೀಗ ಬ್ರೀಡ್ಜ್ ಇಲ್ಲದೆ ಜನ ಸಂಕಷ್ಟ ಪಡುತ್ತಿದ್ದು, ಮಳೆಗಾಲ ಬಂತೆಂದ್ರೇ ನಮಗೆ ಸಮಸ್ಯೆ ಆಗುತ್ತೆ ಪುನಃ ಬ್ರಿಡ್ಜ್ ನಿರ್ಮಿಸಿ ಎಂದು ಇದೀಗ ಗ್ರಾಮಸ್ಥರ ಅಂಬೋಣವಾಗಿದೆ.
ಸದ್ಯ ಬ್ರೀಡ್ಜ್ ಬಿದ್ದ ಸ್ಥಳದಲ್ಲಿಯೇ ಇದ್ದಂತಹ 12 ಪೈಪ್’ಗಳು ಇದೀಗ ಮಾಯವಾಗಿದ್ದು ಎಂದು ಹೇಳಲಾಗುತ್ತಿದ್ದು, ಸರ್ಕಾರಿ ಕಾಮಗಾರಿ ಹಾಗೂ ಹಣ ಎರಡನ್ನೂ ನುಂಗಿ ಹಾಕಿದ್ದು ಯಾರು ಎಂಬ ಪ್ರಶ್ನೆ ಸಾರ್ವಜನಿಕರಿಗೆ ಎದುರಾಗಿದೆ ?
ಮುಂದುವರೆದು ಸರ್ಕಾರದ ನಿಯಮದ ಪ್ರಕಾರ ಒಂದು ಕಾಮಗಾರಿ ಮುಕ್ತಾಯ ಕಂಡು ಇಲಾಖೆ ಅಧಿನಕ್ಕೆ ಸೇರುವವರೆಗೂ ಆ ಕಾಮಗಾರಿ ಜವಾಬ್ದಾರಿ ಗುತ್ತಿಗೆದಾರನೇ ಹೊಂದಿರುತ್ತಾರೆ. ಆದರೆ ಗುಡೇನಕಟ್ಟಿ ಅಲ್ಲಾಪೂರ ಬ್ರಿಡ್ಜ್ ಯಾರೋ ದುಷ್ಕರ್ಮಿಗಳು ಕೆಡವಿದ್ದಾರೆ ಎಂದಾದರೇ ಬ್ರಿಡ್ಜ್’ನಿಂದ ಇಲಾಖೆಗೆ ಅನುಭವಿಸಿದ 4.90 ಲಕ್ಷ ಹಣದ ವೆಚ್ಚ ಯಾರ ಹೆಗಲಿಗೆ ಎನ್ನುವುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇದಕ್ಕೆ ಸಂಬಂಧಿಸಿದಂತೆ ಜನರು ಕುಂದಗೋಳ ಪಂಚಾಯತ್ ರಾಜ್ ಮುಖ್ಯ ಇಂಜಿನಿಯರ್ ಎ.ಐ.ನಾಯ್ಕರ್ ಅವರಿಗೆ ಕೇಳಿದರೂ ಸಹ ಇದಕ್ಕೆ ಪೂರಕ ದಾಖಲೆ ನೀಡುತ್ತಿಲ್ಲವಂತೆ.
ಇಷ್ಟೆಲ್ಲಾ ಬೆಳವಣಿಗೆ ಆದರೂ ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ತುಟಿ ಪಿಟಿಕ್ ಎನ್ನದೇ ಇರುವುದು ಮತ್ತಷ್ಟೂ ಸಂಶಯಕ್ಕೂ ಕಾರಣವಾಗಿದ್ದು, ದಕ್ಷ ಪ್ರಮಾಣಿಕ ಅಧಿಕಾರಿ ಎಂದೇ ಹೆಸರು ಪಡೆದಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿಕೆ ಅವರು ಈ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳತ್ತಾರಾ? ಇಲ್ಲಲಾ ಎಂಬುದನ್ನು ಕಾದು ನೋಡಬೇಕಿದೆ.