ಕುಂದಗೋಳ : ಒಂದೇಡೆ ಸರ್ಕಾರಿ ಕಚೇರಿಯಲ್ಲಿ ಕನಿಷ್ಠ 3 ವರ್ಷ ಗರಿಷ್ಠ 5 ವರ್ಷ ಸೇವೆ ಸಲ್ಲಿಸಬೇಕೆಂಬ ಘನ ಆದೇಶ ಕುಂದಗೋಳ ತಹಶೀಲ್ದಾರ ಕಚೇರಿಯಲ್ಲೇ ಪಾಲನೆ ಆಗದೆ ಸ್ವತಃ ತಹಶೀಲ್ದಾರರೇ 8,9,10,12 ವರ್ಷ ಒಂದೇಡೆ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಪೋಷಿಸುತ್ತಿದ್ದಾರೆಯೆ ? ಎಂಬ ಸಂಶಯ ಎಲ್ಲೇಡೆ ವ್ಯಕ್ತವಾಗುತ್ತಿದೆ.
ಕುಂದಗೋಳ ತಹಶಿಲ್ದಾರ ಕಚೇರಿ
ಹೌದು, ಕುಂದಗೋಳ ತಾಲೂಕು ದಂಡಾಧಿಕಾರಿ ಕಾರ್ಯಾಲಯದಲ್ಲೇ ಸರ್ಕಾರದ ಆದೇಶ ಮೀರಿ ಒಂದೇ ಕಚೇರಿಯಲ್ಲಿ, ಒಂದೇ ಸ್ಥಳದಲ್ಲಿ ಬರೋಬ್ಬರಿ 10 ರಿಂದ 14 ವರ್ಷಗಳ ವರೆಗೆ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.
ಕುಂದಗೋಳ ತಹಶೀಲ್ದಾರ ಚುನಾವಣಾ ಕಾರ್ಯಾಲಯದ ರಾಜು ದುಂಡಪ್ಪನ್ನವರ, ಶಿರಸ್ತೇದಾರ್ ಕಾರ್ಯಾಲಯ ಉದಯಕುಮಾರ್ ಗೌಡ, ಮೊಹಮ್ಮದಸಾದಿಕ್ ಸೌದಾಗರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಹಿತ ಒಂದೇಡೆ ಕರ್ತವ್ಯವನ್ನು ಬರೋಬ್ಬರಿ 7-8 ವರ್ಷಕ್ಕೂ ಅಧಿಕ ಅವಧಿ ಗೈದಿದ್ದಾರೆ.
ಇದಲ್ಲದೆ ಸ್ವತಃ ತಹಶೀಲ್ದಾರ ಕಚೇರಿ ಅನೇಕ ಅಧಿಕಾರಿಗಳು ಒಂದೇಡೆ 5 ವರ್ಷ ಸೇವೆ ಮುಗಿದರೂ ಸಹ ಬೇರೆ ಜನರ ಕುಮ್ಮಕ್ಕು ಹಾಗೂ ಜನಪ್ರತಿನಿಧಿಗಳ ಆಪ್ತರ ಹೆಸರನ್ನು ಹೇಳಿಕೊಂಡು ತಮ್ಮ ಸೇವೆಯನ್ನು ಗರಿಷ್ಠ ಅವಧಿ ಮುನ್ನೆಡೆಸಿದ್ದಾರೆ.
ಅಶೋಕ ಶಿಗ್ಗಾಂವಿ, ತಹಶಿಲ್ದಾರ, ಕುಂದಗೋಳ
ಇನ್ನೂ ಈ ಬಗ್ಗೆ ಗಮನಿಸಬೇಕಾದ ತಹಶೀಲ್ದಾರ ಸಹ ತುಟಿಪಿಟಕ್ ಎನ್ನದೇ ಸುಮ್ಮನೆ ಇರುವುದು ಅಸಮಂಜಸ ಎನಿಸಿದೆ.
ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು, ಧಾರವಾಡ
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಾಹೇಬ್ರೆ ದಯವಿಟ್ಟು ಭ್ರಷ್ಟಾಚಾರ ತೆಡೆದು ಸರ್ಕಾರಿ ಕೆಲಸ ಜನಸಾಮಾನ್ಯರಿಗೆ ಸರಳವಾಗುವ ನಿಟ್ಟಿನಲ್ಲಿ ಅವಧಿ ಮೀರಿದ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ಕಲ್ಪಿಸಿರಿ.