Top Newsಆರೋಗ್ಯಜಿಲ್ಲೆರಾಜಕೀಯರಾಜ್ಯ
Trending

ನೂತನ ಕಿಮ್ಸ್ ನಿರ್ದೇಶಕರಾಗಿ ಡಾ.ಕಮ್ಮಾರ ನೇಮಕ, ಕಾಂಗ್ರೇಸ್ ಮುಖಂಡ ಶಹಜಮಾನ್’ರಿಂದ ಶುಭಾಶಯ…

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಗೆ ನೂತನ ನಿರ್ದೇಶಕರಾಗಿ ಡಾ.ಎಸ್.ಎಫ್ ಕಮ್ಮಾರ ಅವರನ್ನು ಪ್ರಭಾರಿ ನಿರ್ದೇಶಕರಾಗಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಅಧಿಕಾರ ವಹಿಸಿಕೊಂಡ ಡಾ. ಎಸ್.ಎಪ್.ಕಮ್ಮಾರ ಅವರನ್ನು ಸ್ಥಳೀಯ ಅಲ್ಪ ಸಂಖ್ಯಾತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡ ಶಾಹಜಮಾನ್ ಮುಜಾಹಿದ್ ಭೇಟಿ ಮಾಡಿ ಸನ್ಮಾನಿಸಿ, ಶುಭ ಕೋರಿದರು.

ಡಾ.ಎಸ್.ಎಫ್.ಕಮ್ಮಾರ ಅವರು ಕಳೆದ 6 ವರ್ಷದಿಂದ ಪಿಎಫ್ಆರ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಎಲಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಡಿ. 7 ಕ್ಕೆ ಅಂದರೆ ಇಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ ಅವರ ಅಧಿಕಾರದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕಮ್ಮಾರ ಅವರು ನೂತನ ನಿರ್ದೇಶಕರಾಗಿ ಅಧಿಕಾರ ಪಡೆಯಲಿದ್ದಾರೆ. ಇವರಿಗೆ ಕಾಂಗ್ರೆಸ್ ಮುಖಂಡ ಶಹಜಮಾನ್ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button