ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ನಿವಾಸಿಯಾದ ಹೆಸ್ಕಾಂ ನಿವೃತ್ತ ಸಿಬ್ಬಂದಿ ಪ್ರಭಯ್ಯ ಕಡಕೊಳ್ಳಮಠ ಅವರ ಮೊಮ್ಮಗ ಹಾಗೂ ವೀರೇಶ್ ಕಡಕೋಳಮಠ ಇವರ ಮಗ ಪ್ರಣವ್ ಕಡಕೊಳ್ಳಮಠ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
9 ನೇ ವರ್ಷದಿಂದ 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಪ್ರಣವ್ ತನ್ನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡಿದ್ದಾನೆ.
ಸದ್ಯ ಜನ್ಮ ಹಬ್ಬ ಎಂದರೆ ಕೇಕ್, ಪಾರ್ಟಿ, ಗಿಫ್ಟ್ ಅಂತೆಲ್ಲಾ ಹಣವನ್ನು ಖರ್ಚು ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಪ್ರಣವ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ತನ್ನ ಜನ್ಮದಿನವನ್ನು ನಿರ್ಗತಿಕರು, ಕೈಲಾದವರು ಹಾಗೂ ರೋಗಿಗಳ ಆರೋಗ್ಯ ವಿಚಾರಿಸಿ, ಹಣ್ಣು-ಹಂಪಲು ವಿತರಿಸಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾನೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಇನ್ನೂ ಪ್ರಣವ್ ಹುಟ್ಟು ಹಬ್ಬಕ್ಕೆ ಅವರ ತಂದೆ ವಿರೇಶ ಕಡಕೊಳ್ಳಮಠ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ ಗೋಕಾಕ್, ಮುಖಂಡರಾದ ಸಾಧಿಕ್ ಯಕ್ಕುಂಡಿ, ಯುವ ನಾಯಕರಾದ ವಿರೇಶ ಗೊಂದಿ ಸೇರಿದಂತೆ ಇನ್ನಿತರರು ಸಾಥ್ ಕೊಟ್ಟರು.
ಇದರ ಜೊತೆಗೆ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ವಿವಿಧ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡಲಾಗಿದೆ.
Once again wish you Happy Birthday ಪ್ರಣವ್…