ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದಲ್ಲಿ ತಾಲೂಕು ಪಂಚಾಯತಿ ಸುಳ್ಳ ಸಹಯೋಗದಲ್ಲಿ ವಿಕಲಚೇತನರ ಆರೋಗ್ಯ ಶಿಬಿರ ನಡೆಯಿತು.
ಈ ವೇಳೆ ಗ್ರಾಮದಲ್ಲಿನ ವಿಕಲಚೇತನರ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಶಾಂತವ ಕುಂಬಾರ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವನಜಾಕ್ಷಿ ಹೊಸೂರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಉಮಾ ಡೊಳ್ಳಿ, ಪ್ರಾಥಮಿಕ ಸುರಕ್ಷಿತ ಅಧಿಕಾರಿಗಳು ಎಸ್ ಜೈ ಶ್ರೀ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವಿ ಆರ್ ಡಬ್ಲ್ಯೂ ರೇಣುಕಾ ಕುಂದಗೋಳ, ಕೆ ಎಚ್ ಪಿ ಟಿ ಹುಬ್ಬಳ್ಳಿ ತಾಲೂಕಿನ ಸಂಯೋಜಕರು ದ್ರಾಕ್ಷಾಯಿಣಿ ಹಂಪಣ್ಣವರ ಸೇರಿದಂತೆ ವಿಕಲಚೇತನರು ಹಾಗೂ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1