ಹುಬ್ಬಳ್ಳಿ: ಗಣೇಶೋತ್ಸವಕ್ಕೆ ದಿನ ಗಣನೆ ಆರಂಭ ಆಗಿದ್ದು, ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ಬಳಸಿ ಎಂಬ ಅಭಿಯಾನವನ್ನು ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರ ನೇತೃತ್ವದ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್’ಗೆ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಂಬಲ ಸೂಚಿಸಿದ್ದಾರೆ.
ಮಣ್ಣಿನ ಗಣಪತಿಗಳನ್ನು ಈ ಬಾರಿಯ ಗಣೇಶೋತ್ಸವದ ಸಂದರ್ಭದಲ್ಲಿ ನಿಮ್ಮ ನಗರಗಳಲ್ಲಿ ಮತ್ತು ಮನೆಗಳಲ್ಲಿ ಸ್ಥಾಪನೆ ಮಾಡಿ ಪೂಜಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಮಹಾನಗರ ಪಾಲಿಕೆ ಸದಸ್ಯರಾದ ಶಿವಕುಮಾರ್ ರಾಯನಗೌಡರ್, ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರ ಪಕ್ಷದ ಮುಖಂಡಯರಾದ ಶಹಜಮಾನ್ ಮುಜಾಹಿದ್, ಮಲ್ಲಿಕಾರ್ಜುನ ಸಾವಕಾರ ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1