ಹಾದಿ ಎಜ್ಯುಕೇಶನ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ…!
ಹುಬ್ಬಳ್ಳಿ: ಈಗಾಗಲೇ ಹಲವಾರು ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿರುವ ಹಾದಿ ಎಜ್ಯುಕೇಶನಲ್ ಆ್ಯಂಡ್ ವೆಲ್ಪೇರ್ ಟ್ರಸ್ಟ್ ಜನರ ಆರೋಗ್ಯದ ದೃಷ್ಟಿಯಿಂದ ಗುರುವಾರ (ಸೆಪ್ಟೆಂಬರ್ 22) ಹಳೇಹುಬ್ಬಳ್ಳಿಯ ಗೌಸಿಯಾ ನಗರದ ರಜಿಯಾ ಟೌನ್ ನಲ್ಲಿನ ಹಾದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿತು.
ಹಾದಿ ಏಜ್ಯೂಕೇಶನ್ ಆ್ಯಂಡ್ ವೆಲ್ಪೇರ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಎಮ್.ಜಿ.ಮನ್ನಾನಿ ಉಸ್ತಾದ್ ಅವರ ನೇತೃತ್ವದಲ್ಲಿ ಧರ್ಮ ಗುರು ಆಲಾ ಹಜರತ್ ಅವರ ಪುಣ್ಯತಿಥಿ (ಉರುಸ್) ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಜನರು ಭಾಗಿಯಾದರು. ಅಲ್ಲದೇ ಹುಬ್ಬಳ್ಳಿಯ ನುರಿತ ತಜ್ಞ ವೈದ್ಯರು ಜನರ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿಗಳನ್ನು ಪಡೆದರು.
ಈ ವೇಳೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಎಂ.ಜೆ. ಮನ್ನಾನ್ನಿ ಉಸ್ತಾದ್ ಮಾತನಾಡಿ, ಪ್ರತಿವರ್ಷ 2 ಬಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತೇವೆ. ಗುರುವಾರದಂದು ಆಯೋಜಿಸಿರುವ ಕಾರ್ಯಕ್ರಮವು ಧರ್ಮ ಗುರು ಆಲಾ ಹಜರತ್ ಅವರ ಪುಣ್ಯತಿಥಿ (ಉರುಸ್) ಅಂಗವಾಗಿ ನಡೆಸಿದ್ದು, ಯಾವುದೇ ಜಾತಿ, ಧರ್ಮವಿಲ್ಲದೇ ಎಲ್ಲ ಸಮೂದಾಯದ ಜನರು ಭಾಗಿಯಾಗಿ ಶಿಬಿರದ ಸದುಪಯೋಗ ಪಡೆದುಕೊಂಡರು. ಅಲ್ಲದೇ 500 ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ ಎಂದರು.
ಇನ್ನು ಕೆಲವು ಕಿಡಿಗೇಡಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಆಗುತ್ತಿದ್ದು, ಅದಕ್ಕೆ ಯಾವುದಕ್ಕೆ ತಲೆಕೊಡದೇ ಹಿಂದೂ-ಮುಸ್ಲಿಂ ಬಾಯಿ ಬಾಯಿ ಎಂಬಂತೆ ಇರೋಣಾ. ಉತ್ತಮ ಸಮಾಜ ನಿರ್ಮಿಸೋಣಾ ಎಂದರು.
ಇದೇ ವೇಳೆ ಶಿಬಿರದಲ್ಲಿ ಭಾಗಿಯಾಗಿದ್ದ ವೈದ್ಯರುಗಳನ್ನು ಸನ್ಮಾನಿಸಲಾಯಿತು.
ಡಾ. ನಿರ್ಮಲಾ ಸಾಲಿ ಮಾತನಾಡಿ, ಹಾದಿ ಎಜ್ಯುಕೇಶನ್ ಟ್ರಸ್ಟ್ ಸಮಾಜಮುಖಿ ಕಾರ್ಯಗಳಿಂದಲೇ ಹೆಸರುವಾಸಿಯಾಗಿದೆ. ಅದರಂತೆ ಇದೀಗ ಆರೋಗ್ಯ ಶಿಬಿರ ಹಮ್ಮಿಕೊಂಡಿದೆ. ಇದರಲ್ಲಿ ನೂರಾರು ಜನರು ಭಾಗಿಯಾಗಿ ತಪಾಸಣೆ ಮಾಡಿಸಿಕೊಂಡರು. ಇನ್ನು ಈ ಟ್ರಸ್ಟ್ ನಿಂದ ಅನೇಕ ಸಮಾಜಮುಖಿ ಕೆಲಸಗಳು ಆಗಲಿ ಎಂದರು.
ಈ ಸಂದರ್ಭದಲ್ಲಿ ಹಾದಿ ಎಜ್ಯುಕೇಶನಲ್ ಆ್ಯಂಡ್ ವೆಲಫೇರ್ ಟ್ರಸ್ಟ್ ನ ಅಜರುದ್ದಿನ್ ಲಖಧಾರೆ, ಸಯ್ಯದ್ ಅಹ್ಮದ್ ಮದನ್, ಆಸಿಫ್ ಇಕ್ಬಾಲ್ ಉಸ್ತಾದ್, ಮುನ್ನಾ ಪನಿಬಾಂಡ್, ಸಾಜಿದ್ ಅಹ್ಮದ್ ಸೌದಾಗಾರ್, ಜಾಕೀರ್ ಸರಾವರಿ, ಯೂಸುಫ್ ಉಸ್ತಾದ್, ಫಾರುಕ್ ಗುಲಬರ್ಗಾ, ಸಾಕೀನ್ ಫಾನಿಬಾಂಡ್, ಅಲಫೀಯಾ ಸರಾವರಿ, ಶಾಜೀಯಾ ಬೇಪಾರಿ ಸೇರಿದಂತೆ ಮುಂತಾದವರು ಇದ್ದರು.
ಅನಾಥ ಮಕ್ಕಳ ರಕ್ಷಣೆ, ಶಿಕ್ಷಣ:
ಹಾದಿ ಎಜ್ಯುಕೇಶನಲ್ ಆ್ಯಂಡ್ ವೆಲ್ಫರ್ ಟ್ರಸ್ಟ್ ಸಮಾಜದಲ್ಲಿ ಕೆಲವು ಕಾರಣಗಳಿಂದಾಗಿ ಅನಾಥವಾಗಿರುವ ಮಕ್ಕಳನ್ನು ರಕ್ಷಿಸಿ ಅವರಿಗೆ ಶಿಕ್ಷಣ ಕೊಡುವ ಸಾರ್ಥಕ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ಟ್ರಸ್ಟ್ ನ 11 ಸರ್ವಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ.