ಹುಬ್ಬಳ್ಳಿಯಲ್ಲಿ ಸಿಸಿಐ ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಡೀಲರ್ ಮಿಟ್
ಹುಬ್ಬಳ್ಳಿ: ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವಾರ್ಷಿಕ ಡೀಲರ್ ಮೀಟ್ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಗುರುವಾರ ನಡೆಯಿತು.
ನವದೆಹಲಿಯ ಎಜಿಎಂ ಮಾರ್ಕೆಟಿಂಗ್ ನ ಮುಖ್ಯಸ್ಥ ಅಲೋಕ ಶುಕ್ಲಾ ನೇತೃತ್ವದಲ್ಲಿ ನಡೆದ ಡೀಲರ್ ಮೀಟ್ ನಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಡೀಲರ್ ಗಳು ಭಾಗವಹಿಸಿದರು. ಈ ವೇಳೆ ಅತಿ ಹೆಚ್ಚು ಸಿಮೆಂಟ್ ಮಾರ್ಕೆಟಿಂಗ್ ಮಾಡಿದ ಪ್ರತಿ ಜಿಲ್ಲೆಯ ಟಾಪ್ ತ್ರೀ ಡೀಲರ್ ಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಈ ವೇಳೆ ಎಜಿಎಂ ಮಾರ್ಕೆಟಿಂಗ್ ನ ಮುಖ್ಯಸ್ಥ ಅಲೋಕ ಶುಕ್ಲಾ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ವಾರ್ಷಿಕ ಡೀಲರ್ಸ್ ಮತ್ತು ಕಂಪನಿಯ ಮೀಟ್ ನಡೆಸಲಾಯಿತು. ಈ ಬಾರಿ ಅತಿ ಹೆಚ್ಚು ವಹಿವಾಟು ನಡೆಸಿದ ಡೀಲರ್ಸ್ ಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಅಲ್ಲದೇ ಕಂಪನಿಯ ಕಾರ್ಯಚಟುವಟಿಕೆಗಳ ಕುರಿತಾದ ಕೆಲವು ಮಾಹಿತಿಗಳನ್ನು ದೃಶ್ಯಗಳ ಮೂಲಕ ನೀಡಲಾಯಿತು ಎಂದರು.
ಡೀಲರ್ಶೀಫ್ ಪಡೆದು ಉತ್ತಮ ವ್ಯಾಪಾರ ವಹಿವಾಟು ನಡೆಸಿ ಪ್ರಶಸ್ತಿ ಪಡೆದ ಡೀಲರ್ ಗಳು ಖುಷಿ ಪಟ್ಟು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಗುರಿ ಸಾಧನೆ ಮಾಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಉತ್ತಮ ವಹಿವಾಟು ನಡೆಸಿ ಪ್ರಶಸ್ತಿ ಪಡೆದ ಡೀಲರ್ ಮಾತನಾಡಿ, ಸಿಸಿಐ ಉತ್ತಮ ಕಂಪನಿಯಾಗಿದೆ. ಯಾವಾಗಲೂ ಗ್ರಾಹಕರ ನಂಬಿಕೆಗೆ ಅರ್ಹವಾಗಿದೆ. ಈ ಕಂಪನಿಯಲ್ಲಿ ನಾನು ಭಾಗವಹಿಸಿದ್ದು ಹೆಮ್ಮೆ ತಂದಿದೆ ಎಂದು ಖುಷಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ರೀಜನಲ್ ಮ್ಯಾನೇಜರ್ ಆರ್.ಕೆ.ಬನಸೋಡೆ, ಸೇಲ್ಸ್ ಆಫೀಸರ್ ನಿತ್ಯಾನಂದ ಸಿಂಗ್, ಕೊಪ್ಪಳ, ಗದಗ ಸೇಲ್ಸ್ ಆಫೀಸರ್ ಆರ್.ಪಿ.ಸಿಂಗ್ ಸೇರಿದಂತೆ ವಿವಿಧ ಜಿಲ್ಲೆಗಳ ಡೀಲರ್ ಗಳು ಭಾಗವಹಿಸಿದ್ದರು.