ಹುಬ್ಬಳ್ಳಿ: ತಮ್ಮ ಮಗಳನ್ನು ಮೋಡಿ ಮಾಡಿ ಲವ್ ಜಿಹಾದ್ ಮಾಡಲಾಗಿದೆ ಎಂದು ಆರೋಪಿಸಿ ಯುವತಿಯ ಪೋಷಕರು ಎಸ್.ಎಸ್.ಕೆ ಸಮುದಾಯದವರೊಂದಿಗೆ ಹುಬ್ಬಳ್ಳಿಯ ಉಪನಗರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಎಸ್.ಎಸ್.ಕೆ ಸಮೂದಾಯದ ಯುವತಿ ಸ್ನೇಹಾಳನ್ನು ಮುಸ್ಲಿಂ ಸಮೂದಾಯದ ಯುವಕ ಇಬ್ರಾಹಿಂ ಅಂತರ್ಜಾತಿ ವಿವಾಹವಾಗಿದ್ದು, ಈ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ತಮ್ಮ ಮಗಳನ್ನು ಮಾಟ, ಮಂತ್ರ ಮಾಡಿ ಕರೆದೊಯ್ದು, ವಿವಾಹವಾಗಿದ್ದಾರೆ. ಇದು ಲವ್ ಜಿಹಾದ್ ಆಗಿದೆ. ಹಾಗಾಗಿ ನಮ್ಮ ಮಗಳನ್ನು ನಮಗೆ ಒಪ್ಪಿಸಬೇಕು. ಅಲ್ಲಿಯವರೆಗೆ ನಾವು ಠಾಣೆಯ ಮುಂಭಾಗದಿಂದ ಎದ್ದೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು. ಪೊಲೀಸರು ಹಾಗೂ ಎಸ್.ಎಸ್.ಕೆ ಸಮಾಜದ ಮುಖಂಡರ ನಡುವೆ ಬೃಹತ್ ಹೈಡ್ರಾಮವೇ ನಡೆದು ಹೋಯಿತು. ಆಮೇಲೆ ಪೊಲೀಸರು ಮನವರಿಕೆ ಮಾಡುವ ಕೆಲಸ ಮಾಡಿದರು ವಿಫಲವಾಗಿ ಪ್ರತಿಭಟನೆ ಮುಂದುವರೆದಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1