ದಾಸ್ತಿಕೊಪ್ಪ ಶ್ರೀ ಬಸವೇಶ್ವರ ಜಾತ್ರೆ : ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು
ಚನ್ನಮ್ಮನ ಕಿತ್ತೂರ: ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಕಾರಣವಾಗಿ ರಾಜ್ಯದ ಗಮನ ಸೆಳೆದಿದೆ.
ಹೌದು, ಇಂದು ನಡೆದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಗ್ರಾಮದ ಮುಸ್ಲಿಂ ಬಾಂಧವರು ನೆರೆದ ಎಲ್ಲ ಭಕ್ತಾದಿಗಳಿಗೆ ತಂಪು ಪಾನೀಯವನ್ನು ನೀಡುವ ಮೂಲಕ ಹಿಂದೂ-ಮುಸ್ಲಿಂ ಎಲ್ಲರೂ ಭಾವೈಕ್ಯಯಿಂದ ಒಂದಾಗಿ ಇದ್ದೇವೆ ಎಂಬ ಸಂದೇಶವನ್ನು ಸಾರಿದ್ದಾರೆ.
ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗ್ರಾಮದ ಯುವ ಮುಖಂಡ ಸಮೀವುಲ್ಲಾ ಕಡೇಮನಿ ನೇತೃತ್ವದ ಯುವಕ ಸಂಘ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಇಂತದ್ದೊಂದು ಕಾರ್ಯ ಮಾಡಿದ್ದು ನಿಜಕ್ಕೂ ವಿಭಿನ್ನ ಮತ್ತು ಅರ್ಥಪೂರ್ಣ ಆಚರಣೆಯಾಗಿದೆ. ಇನ್ನು ಇವರ ಈ ಸೇವೆಯಿಂದ ಭಾವೈಕ್ಯತೆ ಹಾಗೂ ಸಾಮರಸ್ಯತೆಗೆ ಮೆರಗು ನೀಡಿದಂತಾಗಿದೆ. ದಾಸ್ತಿಕೊಪ್ಪದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೌಹಾರ್ದ ಕಂಡ ಜನ ಮೆಚ್ಚುಗೆ ವ್ಯಕ್ತಪಡಿಸಿದರು.
ಆರದ ಅಪ್ಪು ಅಭಿಮಾನ, ಜಾತ್ರೆಯಲ್ಲೂ ಮೆರೆದ ಡಾ.ಪುನೀತ್; ಚನ್ನಮ್ಮ ಕಿತ್ತೂರು ದಾಸ್ತಿಕೊಪ್ಪ ಗ್ರಾಮದ ಬಸವೇಶ್ವರ ಜಾತ್ರೆಯಲ್ಲಿ ಇತ್ತೀಚೆಗೆ ನಿಧನರಾದ ನಟಸಾರ್ವಭೌಮ ಡಾ.ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಅಪ್ಪು ಭಾವಚಿತ್ರ ಇಟ್ಟುಕೊಂಡು ಇಡೀ ರಥೋತ್ಸವದ ಮುಂದೆ ಡಾನ್ಸ್ ಮಾಡುತ್ತ ಮೆರವಣಿಗೆ ನಡೆಸಿದರು.