Top NewsUncategorizedಅಪರಾಧಜಿಲ್ಲೆ
Trending

ಹೆದರಿಸಿ-ಬೆದರಿಸಿ ಹಣ ಮತ್ತು ಮೊಬೈಲ್​​ಗಳ ದೋಚುತ್ತಿದ್ದ ಖತರ್ನಾಕ್​​ ಕಳ್ಳರ ಬಂಧನ..!!

ಹುಬ್ಬಳ್ಳಿ: ವಾಯು ವಿಹಾರಕ್ಕೆ ಹೋಗಿದ್ದ ಸಾರ್ವಜನಿಕರನ್ನು ಹೆದರಿಸಿ ಅವರಿಂದ ಮೊಬೈಲ್ ಹಾಗೂ ನಗದನ್ನು ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು, ಕಳೆದ ನಾಲ್ಕು ದಿನಗಳ ಹಿಂದೆ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹಿಂಭಾಗದಲ್ಲಿರುವ “ನಮೋ ಪಾರ್ಕ್” ಗೆ ವಾಯು ವಿಹಾರಕ್ಕೆ ಹೋಗಿದ್ದ ಇಬ್ಬರನ್ನು ಹೆದರಿಸಿ ಬೆದರಿಸಿ ಅವರಿಂದ 73 ಸಾವಿರ ಹಾಗೂ 27 ಸಾವಿರ ಮೌಲ್ಯದ ಎರಡು ಫೋನ್ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಕೂಡಲೇ ತನಿಖೆಗೆ ಇಳಿದ ಇನ್ಸ್ ಪೆಕ್ಟರ್ ಅರುಣಕುಮಾರ ಸಾಳಂಕೆ ನೇತೃತ್ವದ ತಂಡ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ಟಿಪ್ಪು ಸುಲ್ತಾನ್ ಬೇಪಾರಿಯಾಗಿದ್ದಾನೆ. ಈತ ಈ ಹಿಂದೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷ ಶಿಕ್ಷೆಗೆ ಒಳಗಾಗಿದ್ದ, ಆದರೆ ಹೈಕೋರ್ಟ್ ಕಂಡಿಷನ್ ಬೆಲ್ ನೀಡಿತ್ತು. ಆದರೆ ಟಿಪ್ಪು ಸುಲ್ತಾನ್ ಬೇಪಾರಿ ಮಾತ್ರ ಮತ್ತೇ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದನು‌. ಸದ್ಯ ಬೆದರಿಸಿ ಸಾರ್ವಜನಿಕರಿಂದ ಹಣದೊಚ್ಚುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಇನ್ಸ್ಪೆಕ್ಟರ್ ಅರುಣಕುಮಾರ್ ಸಾಲುಂಕೆ ನೇತೃತ್ವದ ಯಶಸ್ವಿಯಾಗಿದ್ದು, ಪ್ರಕರಣವನ್ನು ಬೆನ್ನಟ್ಟಿದ ಸಿಬ್ಬಂದಿಗಳಾದ ಕಟ್ನಳ್ಳಿ, ನರೇಂದ್ರ, ಪಮ್ಮಾರ್, ಗಣಪತಿ, ಸುಧಾಕರಗೆ ಪೋಲಿಸ್ ಆಯುಕ್ತ ಲಾಬುರಾಮ್ ರಿವಾರ್ಡ್ ಘೋಷಣೆ ಮಾಡಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button