Uncategorizedಜಿಲ್ಲೆವಿಡಿಯೋ

ಪೋಲಿಸಪ್ಪನ ಮನೆಗೆ ನುಗ್ಗಿದ ನಾಗರಾಜಾ…!!

ಹುಬ್ಬಳ್ಳಿ: ಪೋಲಿಸಪ್ಪನ ಮನೆಯ ಪಕ್ಕದಲ್ಲಿ ಬೃಹತ್ ಗಾತ್ರದ ನಾಗರಹಾವು ಕಂಡು ಜನರು ಬೆಚ್ಚಿ ಬಿದ್ದಿರುವ ಘಟನೆ ತಾಲೂಕಿನ ಹೆಬಸೂರು ಗ್ರಾಮದಲ್ಲಿ ಇಂದು (ಮಾ.28) ನಡೆದಿದೆ.

ನದಾಫ್ ಎಂಬುವವರ ಮನೆಯ ಮುಂದೆ ಬಣವಿ ಹಾಕಲಾಗಿತ್ತು. ಮೊನ್ನೆ ಬಣವಿ ತೆರವುಗೊಳಿಸಿ ನೆಲವನ್ನು ಸರಿಮಾಡಿದರು. ಈ ನೆಲದಲ್ಲಿ ನಾಗರವನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಹಾವನ್ನು ಕಂಡು ಮನೆಯ ಮಾಲೀಕರು ಉರಗ ತಜ್ಞ ಸ್ನೇಕ ಸಂಗಮೇಶ ಎಂಬುವವರಿಗೆ ಸುದ್ದಿ ಮುಟ್ಟಿಸಿದ್ರು. ಆ ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞ ಸಂಗಮೇಶ, ಬೃಹತ್ ಗಾತ್ರದ ನಾಗರ ಹಾವನ್ನು ರಕ್ಷಣೆ ಮಾಡಿದ್ರು. ಈ ಮೂಲಕ ಮನೆಯವರು ಮತ್ತು ಸ್ಥಳೀಯರು ನಿಟ್ಟುಸಿರು ಬಿಟ್ಟರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button