Uncategorizedಜಿಲ್ಲೆರಾಜಕೀಯ

ರಸ್ತೆಗಳ ಸುಧಾರಣೆಗೆ ಪಣ -ಶಾಸಕಿ ಕುಸುಮಾವತಿ ಶಿವಳ್ಳಿ

 

ಹುಬ್ಬಳ್ಳಿ: ಎಲ್ಲರಿಗೂ ಉತ್ತಮವಾದ ರಸ್ತೆ,ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಸಮಾಜ ಕಲ್ಯಾಣ ಇಲಾಖೆಯು ಅಡಿಯಲ್ಲಿ ರಸ್ತೆ ನಿರ್ಮಾಣವನ್ನು ಮಾಡಲಾಗುತ್ತಿದ್ದು, ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಹುಬ್ಬಳ್ಳಿ ತಾಲೂಕಿನ ಪಾಳೇ ಗ್ರಾಮದಲ್ಲಿ ಎಸ್.ಸಿ.ಪಿ.ಟಿ.ಎಸ್. ಯೋಜನೆಯ ಅಡಿಯಲ್ಲಿ 30 ಲಕ್ಷ ರೂ.ಗಳ ಮೊತ್ತದ ರಸ್ತೆ ನಿರ್ಮಾಣದ ಕಾಮಗಾರಿಗೆ ಶನಿವಾರ(ಮಾ.26) ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗಾಗಲೇ ತಮ್ಮ ಗ್ರಾಮದಲ್ಲಿ ಹಲವಾರು ಯೋಜನೆಗಳನ್ನು ದೊರಕುವಂತೆ ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿದ್ದೇನೆ, ಈಗ ತಮ್ಮ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ರಸ್ತೆ ಅಭಿರುದ್ಫಿ ಮಾಡುವ ನಿಟ್ಟಿನಲ್ಲಿ ಭೂಮಿ ಪೂಜೆಯನ್ನು ಮಾಡಿದ್ದೇನೆ ಎಂದು ಅವರು ಹೇಳಿದರು.

ಜಿಪಂ ಮಾಜಿ ಸದಸ್ಯ ಚನ್ನವ್ವ  ಶಿವನಗೌಡ್ರ ಮಾತನಾಡಿ, ಸರಕಾರ ನೀಡಿದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಈ ಯೋಜನೆಗಳನ್ನು ನಮ್ಮ ಗ್ರಾಮಕ್ಕೆ ತಲುಪಿಸಿದ ಈ ಕ್ಷೇತ್ರದ ಶಾಸಕರಾದ ಕುಸುಮಾವತಿ ಸಿ ಶಿವಳ್ಳಿವರಿಗೆ ಕೃತಜ್ಞತೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಸನಗೌಡ ಶಿವನಗೌಡ್ರ,,ಪವಿತ್ರ ಯಲಿವಾಳ,ಮಲ್ಲನಗೌಡ ಜೀವನಗೌಡ,ಮಂಜು ಸರಸ್ವತಿ,ಗಂಗಾನಗೌಡ್ರ ಶಿವನಗೌಡ್ರ, ಗುರಪ್ಪ ಗಾಂಜಿ,ಮಂಜುನಗೌಡ ಹುಡೆದ, ಮಲ್ಲಿಕಾರ್ಜುನ ಭರಮಗೌಡ್ರ,ರಂಗಪ್ಪ ಮಾದರ,ಸಂತೋಷ ಸೊಟ್ಟಮ್ಮನವರ, ಖಾಶಿಮಸಾಬ ನದಾಫ್, ಆನಂದ ಪೂಜಾರ,ಸಾಧಿಕ ಮುಲ್ಲಾ,ಗ್ರಾಪಂ ಅಧ್ಯಕ್ಷ ಹನಮಂತಪ್ಪ ಖಂಡುನವರ,ಚನ್ನಪ್ಪಗೌಡ ಬಸನಗೌಡ, ಸಿದ್ದಪ್ಪ ಯಲಿವಾಳ,ಸೇರಿದಂತೆ ಮುಂತಾದವರು
ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button