ದೇವರಿಗೆ ನೋಟಿಸ್ ಜಾರಿ ಮಾಡಿದ ಕೋರ್ಟ್..?
ಛತ್ತೀಸ್ ಗಢ; ಪ್ರಪಂಚ ದೇವರ ಸೃಷ್ಟಿ ಅಂತಾರೆ. ಆದರೆ ಅದೇ ದೇವರಿಗೆ ಮನುಷ್ಯರು ನೋಟಿಸ್ ನೀಡಿದರೇ? ಹೌದು ಇಂತಹ ಅಪರೂಪದ ಘಟನೆ ಛತ್ತೀಸ್ ಗಡದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ರಾಯಗಢ ಮುನ್ಸಿಪಲ್ ಕಾರ್ಪೊರೇಶನ್ ಪ್ರದೇಶದ ವಾರ್ಡ್ ಸಂಖ್ಯೆ 25 ರ ಕೌಹಕುಂದದಲ್ಲಿ ಮಹಿಳೆಯೊಬ್ಬರು ನಜುಲ್ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾಳೆಂದು ಆರೋಪಿಸಿ ಅದನ್ನು ಕೂಡಲೇ ತೆರವು ಮಾಡಬೇಕೆಂದು ಛತ್ತಿಸಗಡ ಹೈಕೋರ್ಟ್ ನಲ್ಲಿ ಅರ್ಜಿ ಹಾಕಲಾಗಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು.
ಇಷ್ಟೆಲ್ಲಾ ಬೆಳವಣಿಗೆ ನಂತರ ತಹಸಿಲ್ ಕೋರ್ಟ್ ಕೌಹಕುಂದದ ಶಿವಮಂದಿರಕ್ಕೆ ಶೋಕಾಸ್ ನೋಟಿಸ್ ನೀಡಿದೆ. ಪರಿಣಾಮ ಸ್ಥಳೀಯರು ನ್ಯಾಯಾಲಯಕ್ಕೆ ಶಿವಲಿಂಗವನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು.
ಆದರೆ, ತಹಶಿಲ್ದಾರರರು ಸಾರ್ವಜನಿಕ ಅಹವಾಲು ಆಲಿಸುತ್ತಿದ್ದ ಕಾರಣಕ್ಕೆ ದೇವರ ವಿಚಾರಣೆ ಸಾಧ್ಯವಾಗದೇ ಎಪ್ರಿಲ್ 13 ಕ್ಕೆ ಮುಂದೂಡಲಾಯಿತು. ಅಷ್ಟಕ್ಕೂ ದೇವರಿಗೆ ನೋಟಿಸ್ ನೀಡಿದ್ದು ಗುಮಾಸ್ತರು ಮಾಡಿದ ತಪ್ಪಿನಿಂದ ಎಂದು ತಿಳಿದುಬಂದಿದೆ.