ಆಗಮಿಸದ ಎಚ್.ಡಿ.ಕುಮಾರಸ್ವಾಮಿ : ಕಾದು ಕಾದು ಸುಸ್ತಾದ ಕಾರ್ಯಕರ್ತರು
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮಾರು 3 ತಾಸು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಾದು ಕಾದು ಬೇಸರಗೊಂಡ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿತು.
ಹೌದು, ಮೊನ್ನೆ ಉಕ್ರೇನ್ ನಲ್ಲಿ ಬಲಿಯಾದ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಲು ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಚಳ್ಳಕೇರಿಗೆ ತೆರಳಲು ಹುಬ್ಬಳ್ಳಿಗೆ ಕುಮಾರಸ್ವಾಮಿ ಆಗಮಿಸಿದರು. ಆದರೆ ಅವರ ಪ್ರವಾಸ ಪಟ್ಟಿಯ ಪ್ರಕಾರ ಮಧ್ಯಾಹ್ನ 12:30 ಕ್ಕೆ ಆಗಮಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯಗಳಿಂದ ಬೆಂಗಳೂರಿನಲ್ಲಿ ವಿಮಾನ ತಡವಾದ ಹಾರಿದ ಕಾರಣ ಹುಬ್ಬಳ್ಳಿಗೆ ಸುಮಾರು ಮೂರು ಗಂಟೆಗೂ ಅಧಿಕ ಕಾಲ ತಡವಾಯಿತು. ಇತ ತಮ್ಮ ಪಕ್ಷದ ಮುಖಂಡರನ್ನು ಭೇಟಿಯಾಗಲು ಹುರುಪಿನಿಂದ ಬಂದಿದ್ದ ಕಾರ್ಯಕರ್ತರು ಮಾತ್ರ ಕಾದು ಕಾದು ಸುಸ್ತಾದರು.
ಒಟ್ಟಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಲು ಕುಮಾರಸ್ವಾಮಿ ಸರಿಯಾದ ಸಮಯಕ್ಕೆ ಆಗಮಿಸದೇ ತಡವಾಗಿ ಆಗಮಿಸದರಿಂದ ಕೆಲ ತೆನೆ ಕಾರ್ಯಕರ್ತರು ಬಂದ ದಾರಿಗೆ ಸುಂಕವಿಲ್ಲವೆಂದು ತೆರಳಿದರೇ, ಕೆಲ ಕಾರ್ಯಕರ್ತ ಕಾದು ಕಾದು ಸುಸ್ತಾಗಿ ಏನಪ್ಪಾ ಇದು ನಮ್ಮ ನಾಯಕರು ಇನ್ನೂ ಬರಲೇ ಇಲ್ಲಾ ಎಂದು ಮನದಲ್ಲಿ ಗುನಗಿದ್ದು ಅಂತು ಸುಳ್ಳಲ್ಲ.