ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿಗೆ ಚಾಲಕನಾದ ಕೊನರೆಡ್ಡಿ
ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ನಾಯಕರನ್ನು ಓಲೈಸಲು ಕಾರ್ಯಕರ್ತರು ಮೇಲಾಟದಲ್ಲಿ ತೊಡಗಿದ ಪ್ರಸಂಗ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ (ಮಾ.20) ಭಾನುವಾರ ಬೆಳಿಗ್ಗೆ ನಡೆದಿದೆ. ಈ ಪ್ರಸಂಗ ಮೂಲ ಹಾಗೂ ವಲಸಿಗರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾದಂತಿದೆ.
ಹೌದು, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ದಿ.ಸಿ.ಎಸ್.ಶಿವಳ್ಳಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ತೆರಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಯರಗುಪ್ಪಿಗೆ ತೆರಳಲು ಮೂಲ ಕಾಂಗ್ರೆಸ್ಸಿಗ ಕಾರ್ಯಕರ್ತರ ಕಾರಿನಲ್ಲಿ ಕುಳಿತುಕೊಂಡಿದ್ದರು. ಆದರೆ ಇತ್ತಿಚೆಗೆ ಅಷ್ಟೇ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ವಲಸೆ ಹೋದ ಮಾಜಿ ಶಾಸಕ ಎಚ್.ಹೆಚ್.ಕೊನರೆಡ್ಡಿ ಸಿದ್ದರಾಮಯ್ಯ ಅವರನ್ನು ಒತ್ತಾಯ ಪೂರ್ವಕವಾಗಿ ತಮ್ಮ ಕಾರಿನಲ್ಲಿ ಕರೆದೊಯ್ಯುದ್ದರು. ಸಿದ್ದರಾಮಯ್ಯ ಅವರಿಗೆ ಮನಸ್ಸಿಲ್ಲದಿದ್ದರು ಕಾರು ಹತ್ತಿದ್ದರು. ನಂತರ ಕೋನರೆಡ್ಡಿ ತಾವೇ ಕಾರು ಚೆಲ್ಲಾಯಿಸಿಕೊಂಡು ಯರಗುಪ್ಪಿಯತ್ತ ಸಾಗಿದರು. ಇದರಿಂದ ಇರಿಸುಮುರಿಸು ಅನುಭವಿಸಿದ ಮೂಲ ಕಾಂಗ್ರೀಸಿಗರು ಹೋಯ್ ಹೋಯ್ ಎಂದು ಜೋರು ಧ್ವನಿ ಮಾಡಿ ಅಸಮಾಧಾನ ತೊಡಿಕೊಂಡರು.