Top NewsUncategorizedಜಿಲ್ಲೆಸಂಸ್ಕೃತಿಸಿನಿಮಾ

ಕಾಶ್ಮೀರಿ ಫೈಲ್ಸ್ ಸಿನಿಮಾ ಬ್ಯಾನ್ ಮಾಡಬೇಕು: ಹಿಂದೂ ಮುಸ್ಲಿಂ ಗೆಳೆಯರ ಬಳಗದಿಂದ ಪತ್ರಿಕಾಗೋಷ್ಠಿ

 

 

ಹುಬ್ಬಳ್ಳಿ: ಕಾಶ್ಮೀರಿ ಫೈಲ್ಸ್ ಸಿನಿಮಾ ಸಮಾಜದಲ್ಲಿ ಕೋಮುಭಾವನೆ ಹುಟ್ಟು ಹಾಕಲು ಕಾರಣವಾಗುತ್ತಿದ್ದು, ಕೂಡಲೇ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮಾಜದ ಸ್ನೇಹಿತರು ಪತ್ರಿಕಾಗೋಷ್ಠಿ ನಡೆಸಿದರು.

ನಗರದಲ್ಲಿಂದು ಮಾತನಾಡಿದ ಅಶ್ಪಕ್ ಕುಮಾಟಕರ್, ಭಾರತ ದೇಶ ಜಾತ್ಯಾತೀತ ರಾಷ್ಟ್ರ. ಇಲ್ಲಿನ ಪ್ರತಿಯೊಬ್ಬ ನಾಗರಿಕ ಜಾತಿ, ಧರ್ಮ,ಭೇದ, ಭಾವವಿಲ್ಲದೇ ಒಟ್ಟಾಗಿ ಅಣ್ಣ-ತಮ್ಮಂದಿರ ಹಾಗೇ ಜೀವಿಸುತ್ತಿದ್ದೇವೆ. ಆದರೆ ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಶ್ಮೀರಿ ಫೈಲ್ಸ್ ಸಿನಿಮಾ ಸಣ್ಣ ಸಣ್ಣ ಮಕ್ಕಳಲ್ಲಿ ದ್ವೇಷ ಭಾವನೆ ಮೂಡಿಸುತ್ತಿದೆ. ಕಾಶ್ಮೀರ ಫೈಲ್ಸ್ ಗಿಂತ, ಜೇಮ್ಸ್ ಸಿನಿಮಾಗೆ ಟ್ಯಾಕ್ಸ್ ವಿನಾಯಿತಿ ನೀಡಬೇಕಿತ್ತು. ಅಪ್ಪು ಮಾಡಿದ ಒಳ್ಳೆಯ ಕೆಲಸಕ್ಕೆ ಬೆಲೆ ಸಿಗುತ್ತಿತ್ತು‌. ಅದನ್ನು ಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಸಿನಿಮಾಗೆ ಪ್ರೋತ್ಸಾಹ ನೀಡುತ್ತಿರುವುದು ಖೇಧಕರ ಕೂಡಲೇ ರಾಷ್ಟ್ರಪತಿಗಳು ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರವೀಣ ಕಟ್ಟಿ, ಪುಷ್ಪರಾಜ ಹಲ್ಲಿ ಇದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button