ಮಹಿಳೆಯ ಕೊಲೆ ಕಂಪ್ಲೀಟ್ ಕಹಾನಿ…(ವಿಶೇಷ)👆
ಹುಬ್ಬಳ್ಳಿ : ಚಿಂದಿ ಆಯುವ ಮಹಿಳೆಯೊಬ್ಬರು ಬೀಕರವಾಗಿ ಹತ್ಯೆಗೀಡಾದ ಘಟನೆ ಇಂದು ನೆಹರೂ ಮೈದಾನದ ಬಳಿ ನಡೆದಿದೆ.
ದಾವಣಗೆರೆ ಮೂಲದ ಸುಮಾ (28) ಮೃತಳಾಗಿದ್ದು, ಈಕೆ ಬಳ್ಳಾರಿ ಮೂಲದ ರಾಮಣ್ಣ ಎಂಬ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ಕಳೆದ ಒಂದು ವರ್ಷದಿಂದ ನಗರದಲ್ಲಿ ಚಿಂದಿ ಹಾಗೂ ಭಿಕ್ಷಾಟನೆ ಮಾಡುತ್ತಾ ಬದುಕು ನಡೆಸುತ್ತಿದ್ದರು. ಇಂದು ( ಮಾ.12) ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ತಂಟೆ ಬಂದಿದ್ದು, ಈ ಕಾರಣದಿಂದ ವಿಪರೀತವಾಗಿ ಕುಡಿದಿದ್ದ ಗಂಡ ಸುಮಾಳ ತಲೆಗೆ ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಹೊಡೆದಾನಂತೆ.. ಪರಿಣಾಮ ತೀವ್ರಸ್ರಾವವಾಗಿ ಒದ್ದಾಡುತ್ತಿದ್ದಳು. ಆಗ ಅಲ್ಲಿ ಇದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಸುಮಾಳಿಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಶವಗಾರಕ್ಕೆ ರವಾನಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಟೌನ್ ಠಾಣೆ ಇನ್ಸ್ಪೆಕ್ಟರ್ ಒನಕುದರಿ ಹಾಗೂ ಡಿಸಿಪಿ ಸಾಹಿಲ್ ಬಾಗಲಾ, ಎಸ್ಸಿಪಿ ಆರ್.ಕೆ.ಪಾಟೀಲ್ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಸಾಹಿಲ್ ಬಾಗಲಾ ಅವರು, ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಹೇಳಿದರು.