Top NewsUncategorizedಆರೋಗ್ಯತಂತ್ರಜ್ಞಾನದೇಶವಿದೇಶ

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು…!

ವಾಷಿಂಗ್ಟನ್: ಇತಿಹಾಸದಲ್ಲಿಯೇ ಮೊದಲ ಬಾರಿಗೆ ವ್ಯಕ್ತಿಯೊರ್ವ ಹಂದಿ ಹೃದಯವನ್ನು ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಮಂಗಳವಾರ (ಮಾ.08) ನಿಧನರಾಗಿದ್ದಾರೆ. ಇವರು ಕಸಿ ಮಾಡಿಸಿಕೊಂಡು ಎರಡು ತಿಂಗಳಲ್ಲೇ ಅವರು ಸಾವನ್ನಪ್ಪಿದ್ದಾರೆ.

ಹೌದು, 57 ವರ್ಷದ ಡೇವಿಡ್ ಬೆನೆಟ್ ಅವರು ಜನವರಿ 7ರಂದು ಹೃದಯ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದಾಗಿ ಎರಡು ತಿಂಗಳಲ್ಲಿ ಅಂದರೆ ಮಾರ್ಚ್ 8ರಂದು ನಿಧನರಾಗಿದ್ದಾರೆ ಎಂದು ಮೇರಿಲ್ಯಾಂಡ್ ಮೆಡಿಕಲ್ ಕಾಲೇಜು ತಿಳಿಸಿದೆ.

ಇನ್ನು ಈ ಶಸ್ತ್ರ ಚಿಕಿತ್ಸೆಯಿಂದ ಭಿನ್ನ ವರ್ಗದ ಅಂಗಾಂಗ ದಾನದ ಸಾಧ್ಯತೆಗೆ ದೊಡ್ಡ ಮುನ್ನಡೆಯಾಗಿತ್ತು. ಭವಿಷ್ಯದಲ್ಲಿ ದಾನಕ್ಕೆ ಲಭ್ಯವಿರುವ ಮಾನವ ಅಂಗಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಬಹುದು ಎಂಬ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ ಕೆಲವು ದಿನಗಳ ಹಿಂದೆ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಅವರು ಚೇತರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾದ ನಂತರ, ಅವರಿಗೆ ಉಪಶಾಮಕ ಆರೈಕೆಯನ್ನು ನೀಡಲಾಯಿತು. ಅವರ ಅಂತಿಮ ಗಂಟೆಗಳಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು” ಎಂದು ಆಸ್ಪತ್ರೆ ತಿಳಿಸಿದೆ.

2021ರ ಅಕ್ಟೋಬರ್ ನಲ್ಲಿ ಡೇವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅವರಿಗೆ ಮಾನವ ಅಂಗ ಕಸಿ ಮಾಡಲು ಸಾಧ್ಯವಿಲ್ಲವೆಂಬ ಕಾರಣದಿಂದ ತಳೀಯವಾಗಿ ಮಾರ್ಪಡಿಸಿದ ಹಂದಿ ಹೃದಯ ಕಸಿ ಮಾಡಲಾಗಿತ್ತು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button