ಹುಬ್ಬಳ್ಳಿ : ಹೀಗೆ ಫೋಟೋದಲ್ಲಿ ಕಾಣುತ್ತಿರುವ ಈ ಅಪ್ರಾಪ್ತೆ ಹೆಸರು ಐಶ್ವರ್ಯ. ವಯಸ್ಸು ಕೇವಲ 16. ಇನ್ನೂ ತನ್ನ ಗೆಳತಿಯರ ಜೊತೆಗೆ ಆಟವಾಡುತ್ತ ಜೀವನ ಕಳೆಯಬೇಕಿದ್ದ ಈ ಅಪ್ರಾಪ್ತೆ ಈಗ ತನ್ನ ತಂದೆ-ತಾಯಿ ಮಾಡಿದ ಸಣ್ಣ ತಪ್ಪಿನಿಂದ ಈ ಲೋಕವನ್ನೇ ಬಿಟ್ಟು ಹೋಗಿದ್ದಾಳೆ . ಅಷ್ಟಕ್ಕೂ ಐಶ್ವರ್ಯಳ ಕರುಣಾ ಜನಕ ಕಥೆ ಏನೂ ಅಂತೀರಾ…ಈ ಕಥೆಯನ್ನು ಓದಿ….!
ಐಶ್ವರ್ಯಳ ಕಂಪ್ಲೀಟ್ ಸ್ಟೋರಿ👆
ಹೀಗೆ ಈ ಮೇಲಿನ ವಿಡಿಯೋದಲ್ಲಿ ಕಿಮ್ಸ್ ಶವಗಾರದ ಮುಂದೆ ತನ್ನ ಮೊಮ್ಮಗಳು ತುಂಬಾ ಚಾಲಾಕಿ ಅಲ್ಲ ಎಂದು ಗದಗದಿತ ದನಿಯಲ್ಲಿ ಆಕೆಯನ್ನು ನೆನೆದು ಅಳುತ್ತಿರುವ ಅಜ್ಜಿ, ಇನ್ನೊಂದೆಡೆ ತನ್ನ ಮಗಳು ನಿನ್ನೆ ತಾನೇ ಫೋನ್ ನಲ್ಲಿ ಮಾತಾಡಿದ್ದಾಳೆಂದು ಗೋಗರೆಯುತ್ತಿರುವ ತಂದೆ. ಆದರೆ ಇದೀಗ ಇಬ್ಬರ ಪಾಲಿಗೂ ಜೀವಕ್ಕೆ ಜೀವವಾಗಿದ್ದ ಐಶ್ವರ್ಯ ಇನ್ನಿಲ್ಲ ಎಂಬ ದುಃಖ…
ಹೌದು, ಈ ದುಃಖಕ್ಕೆ ಕಾರಣವಾಗಿದ್ದು ಐಶ್ವರ್ಯಳ ಸಾವು, ನಿನ್ನೆಯವರೆಗೆ ಸಿದ್ದಾರೂಢರ ಜಾತ್ರೆ ಮಾಡಿ ತನ್ನ ಕುಟುಂಬಸ್ಥರೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ಐಶ್ವರ್ಯ. ನಿನ್ನೆ ತಡರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿದ್ದಾಳೆ.
ಹುಬ್ಬಳ್ಳಿಯ ಗೋಪನಕೊಪ್ಪದ ವಡ್ಡರ ಓಣಿಯಲ್ಲಿ ಈ ದುರ್ಘಟನೆ ನಡೆದಿದ್ದು, ಐಶ್ವರ್ಯ (16) ಮೃತಳಾಗಿದ್ದಾಳೆ. ಒಂದೂವರೆ ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಕೆಂಗೇರಿಮಡ್ಡಿ ಗ್ರಾಮದ ಯುವತಿ ಐಶ್ವರ್ಯ ಹಾಗೂ ಗೊಪ್ಪನಕೊಪ್ಪದ ವಡ್ಡರ ಓಣಿಯ ಮುತ್ತುರಾಜ್ ಸುಳ್ಳದ ನಡುವೆ ಬಾಲ್ಯ ವಿವಾಹವಾಗಿತ್ತು. ಆದರೆ ಐಶ್ವರ್ಯ ಅಪ್ರಾಪ್ತೆಯಾದ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನವ ವಧು-ವರರ ಕುಟುಂಬಸ್ಥರಿಗೆ ಮಧು 18 ವರ್ಷ ತುಂಬುವವರೆಗೆ ಗಂಡನ ಮನೆಗೆ ಹೋಗಿ ಜೀವನ ನಡೆಸಬಾರದು ಎಂದು ಆದೇಶಿಸಿದರು. ಮೊನ್ನೆ ನಗರದ ಸಿದ್ದಾರೂಢಮಠದ ಜಾತ್ರೆ ಮುತ್ತುರಾಜ ಸುಳ್ಳದ ಮಹಾಲಿಂಗಪುರಕ್ಕೆ ಐಶ್ವರ್ಯಳನ್ನು ಕರೆದುಕೊಂಡು ಬಂದನಂತೆ. ಆದರೆ ಜಾತ್ರೆ ಮುಗಿದು ವಾರ ಕಳೆದಿಲ್ಲ ವಿವಾಹಿತೆ ಐಶ್ವರ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.
ಮುತ್ತುರಾಜ ತನ್ನ ಮಗಳಿಗೆ ಕುಡಿದು ಬಂದು ಕಿರುಕುಳ ನೀಡಿ, ಹೊಡೆದು ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ ಎಂದು ಐಶ್ವರ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಅಳಿಯ ಮುತ್ತುರಾಜ ಸುಳ್ಳದ ಸೇರಿದಂತೆ ಆತನ ಸಹೋದರಿಯರು ಮತ್ತು ಮುತ್ತುರಾಜ ತಾಯಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಅಶೋಕ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮ ಮಗಳನ್ನು ಜಾತ್ರೆಗೆಂದು ಕರೆಸಿಕೊಂಡು ಬಂದು ಕಿರುಕುಳ ನೀಡಿ, ಮುತ್ತುರಾಜ ಕುಡಿದು ಬಂದು ಕಿರಿಕಿರಿ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಳಿಯ ಹಾಗೂ ಅವರ ಮನೆಯವರ ವಿರುದ್ಧ ಯುವತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಒಟ್ಟಾರೆಯಾಗಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಮಧುಮಗಳು ಕೇವಲ ಒಂದೂವರೆ ಸುಖ ಸಾವನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ. ಹೆತ್ತ ಮಕ್ಕಳನ್ನು ಕಳೆದುಕೊಂಡ ತಪ್ಪಿತಸ್ಥ ಕಣ್ಣೀರಿಡುತ್ತಿದ್ದಾರೆ, ಆರೋಪಿಗಳಿಗೆ ಕಠಿಣ ಶಿಕ್ಷೆ ಎಂದು ಒತ್ತಾಯಿಸಿದ್ದಾರೆ.