Top NewsUncategorizedಅಪರಾಧ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ…!

ಹುಬ್ಬಳ್ಳಿ: ಬೇಲಿಯೇ ಎದ್ದು ಹೊಲ ಮೇಯ್ದರೇ ಹೇಗೆ,‌ ಈ ಮಾತಿನಂತೆ ಸಾಲ ತೆಗೆದುಕೊಳ್ಳಲು ಬ್ಯಾಂಕಿನ ವ್ಯವಸ್ಥಾಪಕರೇ ಗ್ರಾಹಕರಿಗೆ ನಕಲಿ ದಾಖಲಾತಿ ಸೃಷ್ಟಿಸಲು ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ.

ಹೌದು, ಸಂಧ್ಯಾ ಎಂಬುವವರೇ ನಕಲಿ ಪತ್ರ ಸೃಷ್ಟಿಸಲು ಸಹಾಯ ಮಾಡಿರುವ ವ್ಯವಸ್ಥಾಪಕಿಯಾಗಿದ್ದು, ಈಕೆ 2019 ರ ಅವಧಿಯಲ್ಲಿ ಮಧುರಾ ಕಾಲೋನಿಯಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವಾಗ ಸಾಲ ತೆಗೆದುಕೊಳ್ಳಲು ಬಂದ ಗ್ರಾಹಕರಿಗೆ ಸಾಲ ಮಂಜೂರು ಮಾಡಲು ನಕಲಿ ವೇತನ ಪ್ರಮಾಣ ಪತ್ರ ಸೃಷ್ಟಿಸಿ ಅವರಿಗೆ ತಲಾ ಐದು ಲಕ್ಷ ರೂ ನಂತೆ ಒಟ್ಟು 7 ಜನರಿಗೆ 35 ಲಕ್ಷ ಹಣವನ್ನು ಬ್ಯಾಂಕಿನಿಂದ ಸಾಲ ನೀಡಿದ್ದಾರಂತೆ. ಸಾಲ ತೆಗೆದುಕೊಂಡ ಗ್ರಾಹಕರು ಮಾತ್ರ ಈವರೆಗೆ ಸಾಲ ಮರುಪಾವತಿ ಮಾಡದೇ ವಂಚನೆ ಮಾಡಿದ್ದಾರೆಂದು ಕೇಶ್ವಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button