Uncategorizedಅಪರಾಧಜಿಲ್ಲೆ
ನಿನ್ನ “ತಿಂಡಿ” ಇದ್ದರೆ “ಮುಟ್ಯಾರ” ನೋಡ..ಖಾಕಿಯಿಂದ ಖಾಕಿಗೆ ಅವಾಜ್…!
ಹುಬ್ಬಳ್ಳಿ: ಹಾರ್ನ್ ವಿಷಯಕ್ಕೆ ಸಂಬಂಧಿಸಿದಂತೆ ಸಾರಿಗೆ ಬಸ್ಸಿನ ಚಾಲಕ ಹಾಗೂ ಆಟೋ ಚಾಲನ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಖಾಕಿಯ ಜಗಳದ ವಿಡಿಯೋ
ಸಾರಿಗೆ ಬಸ್ಸೊಂದು ಹೊಸೂರಿನ ಬಸ್ ಟರ್ಮಿನಲ್ ನಿಂದ ಚೆನ್ನಮ್ಮ ವೃತ್ತದ ಮೂಲಕ ಹೋಗುತ್ತಿದ್ದಾಗ ಚನ್ನಮ್ಮ ಸರ್ಕಲ್ ನಲ್ಲಿ ವಾಹನ ದಟ್ಟನೆ ಇದ್ದರು ಸಹಿತ ಬಸ್ಸಿನ ಚಾಲಕ ಮೇಲಿಂದ ಮೇಲೆ ಹಾರ್ನ್ ಮಾಡಿದ್ದಾನೆ. ಪರಿಣಾಮ ಮುಂದಿದ್ದ ಆಟೋ ಚಾಲಕ ಹಾರ್ನ್ ಮಾಡದಂತೆ ತಿಳಿಸಿದ್ದಾನೆ. ಆದಾಗ್ಯೂ ಬಸ್ ಚಾಲಕ ಹಾರ್ನ್ ಮಾಡಿದ್ದಾಗ ಕುಪಿತಗೊಂಡ ಆಟೋ ಚಾಲಕ ಬಸ್ಸ ಚಾಲಕನೊಂದಿಗೆ ಜಗಳ ತೆಗೆದಿದ್ದಾನೆ. ನಂತರ ಬಸ್ಸಿನ ನಿರ್ವಹಕ ಕೂಡಾ ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾನೆ. ಆಗಲು ಮಾತಿಗೆ ಮಾತು ಬೆಳೆದು ನಿರ್ವಹಕ “ನನ್ನ ಮುಟ್ಟಿ ನೋಡ ಬೇರೆ ಆಕ್ಕೇತಿ” ಎಂದು ಅವಾಜ್ ಹಾಕಿದ ಘಟನೆ ಕೂಡಾ ನಡೆಯಿತು. ನಂತರ
ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಜಗಳ ಬಿಡಿಸಿ ಕಳಿಸಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1