ಕಂಪ್ಯೂಟರ್ ಆಪರೇಟರ್ ಇದೀಗ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಂಟ್ರಿ…!
ಈತ ಪಕ್ಕಾ ಹಳ್ಳಿ ಹೈದಾ, ಮಾತು ಒರಟು ಆದರೆ ಮನಸ್ಸು ಮಾತ್ರ ಮೃದು. ಹಿಡಿದ ಕಾರ್ಯವನ್ನು ಪೂರ್ಣಗೊಳಿಸದೇ ಬಿಡದ ಹಠಮಾರಿ. ಇದೀಗ ಈ ಹಠಮಾರಿತನವೇ ಈತನನ್ನು ಧಾರವಾಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿಸಿದೆ.
ಹೌದು, ಇಷ್ಟೆಲ್ಲಾ ಪೀಠಿಕೆ ಹಾಕಿ, ಮೇಲೊಂದು ಫೋಟೋ, ದೊಡ್ದ ದೊಂದು ಹೆಡ್ ಲೈನ್ ಕೊಟ್ಟು ಸಹ ಬೇರೆಯವರ ಬಗ್ಗೆ ಹೇಳೋದಕ್ಕೆ ಸಾಧ್ಯವೇ?…
ಯಸ್ ಈ ಕಥೆಯ ಹಿರೋ ಯಲ್ಲಪ್ಪ ಸೋಲಾರಗೊಪ್ಪ. ಮೂಲತಃ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದವರಾವನಾದ ಈತ, ಪಕ್ಕಾ ರೈತಾಪಿ ಕುಟುಂಬದ ಹುಲಿ. ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಯಲ್ಲಪ್ಪ ಬಾಲ್ಯದಿಂದಲೂ ತುಂಟ, ಹಠಮಾರಿ. ಆದರೆ ಕೆಲಸದಲ್ಲಿ ಈತನಿಗೆ ಇರುವ ಶ್ರದ್ದೆ ಭಕ್ತಿ ಇತರರಿಗೆ ಮಾದರಿ.
ಧಾರವಾಡದ ಕವಿವಿಯಲ್ಲಿ MSC electronic media ದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದುಕೊಂಡು, ಸದ್ಯ Tv -5 ಕನ್ನಡ ಸುದ್ದಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಲ್ಲಪ್ಪ. ಪತ್ರಿಕೋದ್ಯಮಕ್ಕೆ ಬಂದ ಕಥೆಯೇ ರೋಚಕ. ಅದು 2013 ರ ಕಾಲ ಆಗ ತಾನೇ ಬಿಎ ಪದವಿಕೊಂಡು, ಅಷ್ಟೋತ್ತಿಗೆ ಆಗಲೇ ಸ್ವಂತ ಕಂಪ್ಯೂಟರ್ ಅಂಗಡಿ ನಡೆಸುತ್ತಿದ್ದ ಯಲ್ಲಪ್ಪ ಶಿಕ್ಷಣಕ್ಕೆ ಕೈ ಮುಗಿದು ವ್ಯವಹಾರಕ್ಕೆ ನಿಂತಿದ್ದನು. ಆದರೆ ಈತನ ಮನಸ್ಸು ಮಾತ್ರ ಸಮಾಜದಲ್ಲಿ ಸಂಕಷ್ಟಕ್ಕೆ ಒಳಗಾದ ಜನರ ಧ್ವನಿಯಾಗಬೇಕು ಎಂಬ ತುಡಿತಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಯಲ್ಲಪ್ಪನ ಕೆಲವು ಸ್ನೇಹಿತರು ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಸಹವಾಸದಿಂದ ಪತ್ರಿಕೋದ್ಯಮಕ್ಕೆ ಬರುವಂತಾಯಿತು.
ಮೊದಲು ಕಸ್ತೂರಿ ಟಿವಿಯಲ್ಲಿ ಯಾದಗಿರಿ ಜಿಲ್ಲಾ ವರದಿಗಾರನಾಗಿ ವೃತ್ತಿ ಜೀವನ ಆರಂಭಿಸಿದ ಯಲ್ಲಪ್ಪ, ನಂತರದಲ್ಲಿ ಹುಬ್ಬಳ್ಳಿ ನಗರದ ವರದಿಗಾರನಾಗಿ ಕೆಲಸ ಮಾಡಿದರು. ಆನಂತರ ನೂತನವಾಗಿ ಆರಂಭಗೊಂಡ tv-5 ಕನ್ನಡ ಸುದ್ದಿ ಸಂಸ್ಥೆಯಲ್ಲಿ ಮತ್ತೆ ಯಾದಗಿರಿ ವರದಿಗಾರನಾಗಿ, ಸದ್ಯ ಹುಬ್ಬಳ್ಳಿ ವರದಿಗಾರನಿರುವ ಯಲ್ಲಪ್ಪ ಹಲವಾರು ನಿಷ್ಪಕ್ಷಪಾತ ವರದಿಗಳು ಮಾಡಿದ್ದಾನೆ. ಸದ್ಯ ಮೊದಲಬಾರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2022-25 ರ ಸಾಲಿನ ಚುನಾವಣೆಯಲ್ಲಿ ಕಾರ್ಯಕಾರಣಿಗೆ ಸ್ಪರ್ಧಿಸಿ 189 ಮತಗಳನ್ನು ಪಡೆಯುವ ಮೂಲಕ ಆಯ್ಕೆಗೊಂಡಿದ್ದಾನೆ.
ಒಟ್ಟಿನಲ್ಲಿ ಕೆಲಸದ ಮೇಲಿನ ಶಿಸ್ತು ಹಾಗೂ ಶ್ರದ್ದೆಯಿಂದ ಇಂದು ಯಲ್ಲಪ್ಪ ಕಾರ್ಯಕಾರಣಿ ಸದಸ್ಯರಾಗಿದ್ದು, ಈತ ಪತ್ರಕರ್ತರ ಧ್ವನಿಯಾಗಿ ಕೆಲಸ ಮಾಡಲಿ ಎಂದು ದಿನವಾಣಿ ತಂಡ ಶುಭ ಹಾರೈಸುತ್ತದೆ. Once again all the best ಯಲ್ಲಪ್ಪ ಸೋಲಾರಗೊಪ್ಪ. ಉತ್ತಮ ಕೆಲಸ ಮಾಡುತ್ತಾ ಸಾಗು.
(ಮುಂದೊಂದು ದಿನ ಕಲಘಟಗಿ ವಿಧಾನಸಭೆ ಕ್ಷೇತ್ರದಿಂದ ಶಾಸಕನಾಗುವ ನಿನ್ನ ಕನಸು ಆದಷ್ಟು ಬೇಗ ಈಡೇರಲಿ)