ಹುಬ್ಬಳ್ಳಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದ 2022-25 ರ ಸಾಲಿನ ಮತ ಎಣಿಕೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಹಣೆಬರಹ ನಿರ್ಧಾರಗೊಂಡಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ.
ಹೌದು, ಜಿಲ್ಲಾ ಘಟಕದ ಅಧ್ಯಕ್ಷ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು, ಪ್ರಧಾನ ಕಾರ್ಯದರ್ಶಿ ಒಂದು ಸ್ಥಾನಕ್ಕೆ ಇಬ್ಬರು, ಹಾಗೂ ಒಂದು ಖಜಾಂಚಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಇದರ ಜೊತೆಗೆ ಜಿಲ್ಲಾ ಕಾರ್ಯಕಾರಣಿಗೆ 15 ಸ್ಥಾನಗಳಿಗೆ 28 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಅದರಂತೆ ರವಿವಾರ ಲ್ಯಾಮಿಂಗ್ಟನ್ ರಸ್ತೆಯ ಪತ್ರಕರ್ತರ ಭವನದಲ್ಲಿ ನಡೆದ ಬೆಳಿಗ್ಗೆ 10 ರಿಂದ ಸಂಜೆಯವರೆಗೆ ನಡೆದ ಮತದಾನ ಚುರುಕಿನಿಂದ ನಡೆಯಿತು. ಸಂಘದ 353 ಸದಸ್ಯರಲ್ಲಿ ಭಾಗಶಃ ಸದಸ್ಯರು ಬಂದು ಮತದಾನ ಮಾಡಿದ್ದರು. ಪರಿಣಾಮವಾಗಿ ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಎಲ್ಲರ ಮನದಲ್ಲಿತ್ತು. ಸಂಜೆ 5 ಗಂಟೆಯಿಂದ ನಡೆದ ಮತ ಎಣಿಕೆ ಕಾರ್ಯ ಮಧ್ಯರಾತ್ರಿ ವರೆಗೆ ನಡೆಯಿತು. ಒಟ್ಟು 13 ಸುತ್ತುಗಳಲ್ಲಿ ನಡೆದ ಮತ ಎಣಿಕೆ ಕಾರ್ಯ ಪ್ರತಿ ಸುತ್ತಿನಲ್ಲೂ ರೋಚಕತೆ ಪಡೆಯ ತೊಡಗಿತ್ತು. ಇಂತಹ ಕುತೂಹಲಕಾರಿ ಚುನಾವಣೆಯಲ್ಲಿ ಯಾವ ಯಾವ ಅಭ್ಯರ್ಥಿಗಳು ಎಷ್ಟೇಷ್ಟು ಮತ ಪಡೆದುಕೊಂಡರು ಎಂಬ ಮಾಹಿತಿ ಈ ಕೆಳಗಿನಂತಿದೆ….
ಅಂತಿಮ ಸುತ್ತಿನ ಸ್ಪರ್ಧೆಯ ನಂತರ ಅಭ್ಯರ್ಥಿಗಳು ಪಡೆದ ಮತಗಳು
ಅಧ್ಯಕ್ಷ ಸ್ಥಾನ
1) ಬಸವರಾಜ ಕಟ್ಟೀಮನಿ- 148
2)ಲೋಚನೇಶ ಹೂಗಾರ- 161
ಪ್ರಧಾನ ಕಾರ್ಯದರ್ಶಿ
1) ಜೆ. ಅಬ್ಬಾಸ ಮುಲ್ಲಾ- 143
2) ಸುಶೀಲೇಂದ್ರ ಕುಂದರಗಿ- 163
ಖಜಾಂಚಿ
1) ಬಸವರಾಜ ಹೂಗಾರ- 159
2)ಮಹೇಂದ್ರ ಚವ್ಹಾಣ- 144
ಸದಸ್ಯರು
1) ಅಕ್ಬರ ಬೆಳಗಾಂವಕರ- 28
2) ಓದೇಶ ಸಕಲೇಶಪುರ- 234
3) ಕಲ್ಮೇಶ ಮಂಡ್ಯಾಳ- 99
4) ಕಾಶಪ್ಪ ಕರದಿನ- 194
5) ಕೇಶವಮೂರ್ತಿ ಬಿ.- 184
6) ಖಾದರಸಾಬ ಡಗಲಿ- 98
7) ಗುರು ಭಾಂಡಗೆ- 176
8) ದತ್ತಾತ್ರೇಯ ಪಾಟೀಲ- 185
9) ನಾಗರಾಜ ಇರಪಣ್ಣವರ- 143
10) ನಾರಾಯಣಗೌಡ ಪಾಟೀಲ- 187
11) ಪರಶುರಾಮ ಹಕ್ಕರಕಿ- 122
12) ಪ್ರಕಾಶ ಮಹಾಜನಶೆಟ್ಟರ- 74
13) ಪ್ರಕಾಶ ಚಳಗೇರಿ- 185
14) ಪ್ರಶಾಂತ ರಾಮನಗೌಡರ- 118
15) ಪ್ರಸನ್ನ ಹಿರೇಮಠ- 154
16) ಬಂಡು ಕುಲಕರ್ಣಿ- 177
17) ಬಸವರಾಜ ಯರಿಬೈಲ್- 134
18) ಮಂಜುನಾಥ ಜರತಾರಘರ- 163
19) ಮಲ್ಲಿಕಾರ್ಜುನ ಪಟ್ಟೇದ- 56
20) ಮಲ್ಲಿಕಾರ್ಜುನ ಬಾಳನಗೌಡ್ರ- 184
21) ಮೆಹಬೂಬ ಮುನವಳ್ಳಿ- 148
22) ಯಲ್ಲಪ್ಪ ಸೋಲಾರಗೊಪ್ಪ- 189
23) ಯಶವಂತ ಮಾನೆ- 49
24) ರವೀಂದ್ರ ಹಳಿಜೋಳ- 101
25) ರಾಜು ಮುದಗಲ್- 110
26) ಶಿವಾನಂದ ಗೊಂಬಿ- 210
27) ಸಂಗಮೇಶ ಮೆಣಸಿನಕಾಯಿ- 187
28) ಹೇಮಂತ ದೊಡ್ಡಮನಿ- 81