Top Newsಅಪರಾಧಜಿಲ್ಲೆರಾಜ್ಯ
Trending

ಹು-ಧಾ ಪೋಲಿಸರ ತೂತು ಬಿದ್ದ ಜೇಬಿಗೆ ಹೊಲಿಗೆ ಹಾಕಲು ಮುಂದಾದ ಪಾಲಿಕೆ ಆಯುಕ್ತ…!

 

ಹುಬ್ಬಳ್ಳಿ : ಹು-ಧಾಮಹಾನಗರದಲ್ಲಿ ಅನಾಥ ಶವಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಇವುಗಳನ್ನು ಶವಗಾರಕ್ಕೆ ಸಾಗಿಸಬೇಕಿರುವ ಪೊಲೀಸರು ಮತ್ತು ಪಾಲಿಕೆಯ ಹೆಗಲೇರಿದೆ. ಆದರೆ ಮೃತ ಶವಗಳನ್ನು ರವಾನಿಸಲು ಸರಿಯಾದ ಸಮಯಕ್ಕೆ ವಾಹನಗಳು ಸಿಗದೇ ಪೊಲೀಸರು ಪರದಾಡಿದ್ದಾರೆ.

ಪಾಲಿಕೆ ಆಯುಕ್ತರು ಹೇಳಿದ್ದೇನು? ಇಲ್ಲಿದೆ ವಿಡಿಯೋ👆

ಹೌದು, ಅವಳಿನಗರದಲ್ಲಿ ನಿರ್ಗತಿಕರು, ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಪಾರ್ಕ್, ಬಸ್ ನಿಲ್ದಾಣ, ಪ್ರದೇಶ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿದೆ. ಇವರಲ್ಲಿ ಅಚಾನಕ್ ಆಗಿ ಮರಣ ಹೊಂದಿದ್ದಾಗ, ಅವರ ಶವಗಳನ್ನು ಆಯಾ ಪ್ರದೇಶದ ವ್ಯಾಪ್ತಿಯ ಪೊಲೀಸರು ಮುಂದೆ ನಿಂತು ಶವಗಳನ್ನು ಜಿಲ್ಲಾ ಆಸ್ಪತ್ರೆ ಇಲ್ಲವೇ, ಕಿಮ್ಸ್ ಶವಗಾರಕ್ಕೆ ರವಾನಿಸಬೇಕಾಗಿದೆ. ಈ ಕಾರ್ಯಕ್ಕೆ ಮಹಾನಗರ ಸಹಕಾರ ನೀಡಿ ತಮ್ಮ ವಾಹನವನ್ನು ನೀಡಬೇಕಿತ್ತು. ಆದರೆ ಕೆಲವು ಅಧಿಕಾರಿಗಳು ಎಡವಟ್ಟಿನಿಂದ ಪೊಲೀಸರು ಮೃತನ ಶವ ರವಾನಿಸಲು ಖಾಸಗಿ ವಾಹನಗಳಿಗೆ ತಮ್ಮ ಹಣ ವ್ಯಯಿಸಿ ಶವ ಸಾಗಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಕಾರಣ ಶವ ಸಾಗಾಟ ಮಾಡಲೆಂದೇ ಮಹಾನಗರ ಪಾಲಿಕೆಯಲ್ಲಿ ಶ್ರದ್ಧಾಂಜಲಿ ವಾಹನ ಶ್ರದ್ಧಾಂಜಲಿ ಅರ್ಪಿಸಿಕೊಂಡು ಎಷ್ಟೋ ದಿನಗಳು ಕಳೆದಿವೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪೋಲೀಸರ ಪರವಾಗಿ ನಿಮ್ಮ ದಿನವಾಣಿ ಪಾಲಿಕೆ ಆಯುಕ್ತರ ಮುಂದೆ ಧ್ವನಿಸಿತ್ತು. ಆ ಧ್ವನಿಗೆ ಇದೀಗ ಪಾಲಿಕೆ ಆಯುಕ್ತರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಈ ರೀತಿ ಅವಳಿನಗರದಲ್ಲಿ ಅನಾಥ ಶವಗಳು ಕಂಡು ಬಂದಲ್ಲಿ, ಕುದ್ದು ನನಗೆ ಕರೆ ಮಾಡಿ ಮಾಹಿತಿ ಕೊಡಿ ಎಂದು ಖಾಕಿ ಕೆಲಸಕ್ಕೆ ಕೈಜೋಡಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button