ಹುಬ್ಬಳ್ಳಿಯ ಐಟಿ ಪಾರ್ಕ್ ನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ..ಕೊಲೆಯೋ?ಆತ್ಮಹತ್ಯೆಯೋ
👆ಮೃತನ ಸ್ನೇಹಿತ ಸಾವಿನ ಬಗ್ಗೆ ಹೇಳಿದ್ದೇನು? ವಿಡಿಯೋ ಇಲ್ಲಿದೆ
ಹುಬ್ಬಳ್ಳಿ : ಸೆಕ್ಯುರಿಟಿ ಗಾರ್ಡ್ನ ಶವ ಭೀಕರವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ಐಟಿ ಪಾರ್ಕ್ ನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಾವಳಿಯಲ್ಲಿ ನಡೆದಿದೆ.
ಮೃತ ದುರ್ದೈವಿ ಚನ್ನಮಲ್ಲಯ್ಯ ಶೇಖಯ್ಯ ಹಿರೇಮಠ (44) ಎಂದು ತಿಳಿದು ಬಂದಿದ್ದು, ಈತ ಮೂಲತಃ ಕುಂದಗೋಳ ತಾಲೂಕಿನ ಹಿತೇನರ್ತಿ ಗ್ರಾಮದ ನಿವಾಸಿ, ಸದ್ಯ ಹುಬ್ಬಳ್ಳಿಯ ನೇಕಾರ ಸುಮಾರು ಪತ್ನಿ ಹಾಗೂ ಇಬ್ಬರ ಮಕ್ಕಳೊಂದಿಗೆ ವಾಸವಾಗಿದ್ದರು. ಈತ ಐಟಿ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ಎಂದಿನಂತೆ ಕೆಲಸಕ್ಕೆ ಇತ ಬಂದಿದ್ದು, ಇಂದು ತಾನು ಕೆಲಸ ಮಾಡುತ್ತಿದ್ದ ಕಛೇರಿಯ ಶೌಚಾಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಹೊಂದಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಕಾರಣವೆಂದು ತಿಳಿದುಬಂದಿಲ್ಲ. ಇನ್ನಷ್ಟೇ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.