ದಿಂಗಾಲೇಶ್ವರ ಶ್ರೀ ಹೇಳಿದ್ದು 100℅ ನಿಜ,ಮಾಜಿ ಸಚಿವ M B ಪಾಟೀಲ್.
ಹುಬ್ಬಳ್ಳಿ: ಮಠಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗಾಗಿ 30% ಕಮಿಷನ್ ನೀಡಬೇಕೆಂಬ ಶಿರಹಟ್ಟಿಮಠದ ಫಕೀರ್ ದಿಗಾಂಲೇಶ್ವರ ಸ್ವಾಮಿಗಳು ಹೇಳಿಕೆಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಬೆಂಬಲ ಸೂಚಿಸಿ ಮಾತನಾಡಿದ್ದು, ಮಠಗಳಿಗೆ 30%, ಉಳಿದವರಿಗೆ 40% ಸ್ವಾಮಿಗಳಿಗೆ 10% ಕಮಿಷನ್ ವಿನಾಯಿತಿ ಬಿಜೆಪಿ ಸರ್ಕಾರ ನೀಡಿದೆ ಎಂದು ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಂತೋಷ ಪಾಟೀಲ್ ಪ್ರಕರಣದಲ್ಲಿ 40% ಕಮಿಷನ್ ರೂಜುವಾಗುತ್ತಿದೆ. ಇದನ್ನು ಕಾಂಗ್ರೇಸ್ ಪಕ್ಷದವರು, ಬೇರೆಯವರು ಹೇಳಿದಲ್ಲ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣವರೇ ಕಳೆದ ಒಂದು ವರ್ಷದಿಂದ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.
ಕೆಂಪಣ್ಣ ಅವರ ಪತ್ರದಲ್ಲಿ ಕೆಲವು ಇಲಾಖೆ ಮಂತ್ರಿಗಳನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳು, ಬಹುತೇಕ ಮಂತ್ರಿಗಳ ಭ್ರಷ್ಟಾಚಾರ ಕಮಿಷನ್ ದಂಧೆ ವಿಪರೀತವಾಗಿದೆ ಎಂದು ಬರೆದಿದ್ದಾರೆ. ಆದರೆ ಪ್ರಧಾನಮಂತ್ರಿಗಳು ಮೌನವಾಗಿದ್ದಾರೆ ಯಾಕೆ. ನಾನು ತಿನ್ನೋದಿಲ್ಲ, ತಿನ್ನುವವರಿಗೂ ಬಿಡೋದಿಲ್ಲ ಎಂದು ಹೇಳುವ ಪ್ರಧಾನ ಮಂತ್ರಿಗಳು ಆದರೆ ಇದೀಗ ಅವರ ಪಕ್ಷದವರೇ ಅಜೀರ್ಣ ಆಗುವಷ್ಟು ತಿನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಎಂ.ಬಿ.ಪಾಟೀಲ್, ಪ್ರಧಾನಿಗಳ ಮೌನ ನೋಡದಾಗ ಮೌನತಿ ಸಮ್ಮತಿ ಲಕ್ಷ್ಮಣಂ ಎಂಬ ಅರ್ಥ ಕೊಡುತ್ತಿದೆ. ಹಾಗಾಗಿ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿದ ಹಾಗೇ ಆಗಿದೆ. ಒಟ್ಟಾರೆ ಸಂತೋಷ ಪಾಟೀಲ್ ಪ್ರಕರಣ, ದಿಂಗಾಲೇಶ್ವರ ಸ್ವಾಮಿಗಳು ಹೇಳಿಕೆಗಳಿಂದ ಬಿಜೆಪಿ 40% ಕಮಿಷನ್ ಸರ್ಕಾರ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಕಿಡಿಕಾರಿದರು.
ಮಠದ ಸ್ವಾಮೀಜಿಗಳು ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಂತೆ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿಗಳು ಇರೋದು ಮಾರ್ಗದರ್ಶನ ಮಾಡೋಕ್ಕೆ, ಆದರೆ ಅವರು ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಬಿಟ್ಟಿರುವುದು, ಅವರ ಆತ್ಮಸಾಕ್ಷಿಗೆ ಬಿಟ್ಟಿರುವುದು ಹಾಗಾಗಿ ಅದರ ಬಗ್ಗೆ ನಾವು ಟೀಕೆ ಟಿಪ್ಪಣಿ ಮಾಡಲು ಬರುವುದಿಲ್ಲ ಎಂದು ಹೇಳಿದರು.